ನವದೆಹಲಿ: ಮಾಜಿ ಒಲಿಂಪಿಕ್ ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲಿಟ್ ಪಿ.ಟಿ ಉಷಾ ಅವರು ಅಂತಾರಾಷ್ಟ್ರೀಯ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ "ವೆಟರನ್ ಪಿನ್" ಆಗಿ ನಾಮ ನಿರ್ದೇಶನಗೊಂಡಿದ್ದಾರೆ.
ಗುರುವಾರ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಆಡಳಿತ ಮಂಡಳಿಗೆ ಮಾಜಿ ಒಲಿಂಪಿಕ್ ಪದಕ ವಿಜೇತೆ ಭಾರತದ ಪಿ.ಟಿ ಉಷಾ ಅವರು ಗುರುವಾರ ಟ್ವಿಟ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
"ವಿಶ್ವ ಅಥ್ಲೆಟಿಕ್ಸ್‌ನಲ್ಲಿನ ಸುದೀರ್ಘ ಹಾಗೂ ಪ್ರಶಂಸನೀಯ ಸೇವೆಯ ಉದ್ದೇಶಕ್ಕಾಗಿ ನನಗೆ ಐಎಎಎಫ್ ವೆಟರನ್ ಪಿನ್ ಆಗಿ ಅವಕಾಶ ನೀಡಿದೆ. ಹಾಗಾಗಿ, ನಂಬಲಾಗದ ಗೌರವಕ್ಕಾಗಿ ಐಎಎಎಫ್ ಧನ್ಯವಾದಗಳು ಹೇಳಲು ಬಯಸುತ್ತೇನೆ" ಎಂದು ಟ್ವಿಟ್ ಮಾಡಿದ್ದಾರೆ.