ಕ್ರೀಡೆ

ಭಾರತದ ಓಟಗಾರ್ತಿ ಸಂಜೀವಿನಿ ಜಾಧವ್ ಎರಡು ವರ್ಷ ಅಮಾನತು

Srinivasamurthy VN
ನವದೆಹಲಿ: ಭಾರತದ ಖ್ಯಾತ ಅಥ್ಲೀಟ್, ಬಹುದೂರದ ಅಗ್ರ ಓಟಗಾರ್ತಿ ಸಂಜೀವಿನಿ ಜಾಧವ್ ರನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ.
ಸಂಜೀವಿನಿ ಜಾಧವ್‌ ಅವರು ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಒಕ್ಕೂಟ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.  ಎರಡು ಬಾರಿ ಏಷ್ಯನ್‌ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತೆ ಸಂಜೀವಿನಿ ಅವರು 2018ರ ಜೂನ್ 29 ರಿಂದಲೇ ಪುನರಾವಲೋಕನ ಅಮಾನತು ಅವಧಿ ಸೇರಿದಂತೆ ಒಟ್ಟು ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿದ್ದಾರೆ. 
ನಾಸಿಕ್‌ ಮೂಲದ ಸಂಜೀವಿನಿ ಜಾಧವ್‌ ಅವರು ಡೋಪಿಂಗ್‌ ಪರೀಕ್ಷೆಯಲ್ಲಿ ವಿಫಲರಾಗಿ ಎರಡು ವರ್ಷಗಳಿಗೆ ಅಮಾನತುಗೊಂಡಿರುವುದು ಇದೇ ಮೊದಲು. ಕಳೆದ ವರ್ಷ ಮೇ. 27 ರಂದು ಮುಕ್ತಾಯವಾಗಿದ್ದ ಬೆಂಗಳೂರು ಟಿಸಿಎಸ್‌ 10-ಕೆ ಹಾಗೂ ಗುಹವಾಟಿಯಲ್ಲಿ 2018ರ ಜೂನ್ 29 ರಿಂದ ನಡೆದಿದ್ದ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ವೇಳೆಯೂ ಅವರ ಮಾದರಿ ಪಡೆಯಲಾಗಿತ್ತು.
ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸಂಜೀವಿನಿ 10 ಸಾವಿರ ಮೀಟರ್ಸ್‌ ಓಟದಲ್ಲಿ ಸ್ಪರ್ಧಿಸಿದ್ದರು. ಅಂತೆಯೇ ಏ‍ಪ್ರಿಲ್ ನಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಲು ಅವರಿಗೆ ನಾಡಾ ಅನುಮತಿ ನೀಡಿತ್ತು. ಅವರು ಅಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಅವರ ಅಮಾನತು ಮಾತ್ರವಲ್ಲದೇ ಅವರು ಗೆದ್ದಿದ್ದ ಪದಕಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
SCROLL FOR NEXT