ಪಿವಿ ಸಿಂಧು 
ಕ್ರೀಡೆ

ಆಸ್ಟ್ರೇಲಿಯಾ ಓಪನ್ ನಿಂದ ಹೊರಬಿದ್ದ ಪಿ.ವಿ. ಸಿಂಧು

ಮೂರನೇ ಶ್ರೇಯಾಂಕಿತೆ ಪಿ.ವಿ ಸಿಂಧು ಅವರು ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತು, ಪದಕದ ಆಸೆ ಕೈ ಬಿಟ್ಟಿದ್ದಾರೆ.

ಸಿಡ್ನಿ: ಮೂರನೇ ಶ್ರೇಯಾಂಕಿತೆ ಪಿ.ವಿ ಸಿಂಧು ಅವರು ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತು, ಪದಕದ ಆಸೆ ಕೈ ಬಿಟ್ಟಿದ್ದಾರೆ.
ಮಂಗಳವಾರ ನಡೆದ ವನಿತೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 19-21, 18-21 ರಿಂದ ಥಾಯ್ಲೆಂಡ್ ನ ನಿಚಾನ ಜಿಂದಪೊಲ್ ವಿರುದ್ಧ ಎರಡು ನೇರ ಸೆಟ್ ಗಳಿಂದ ಸೋಲುವ ಮೂಲಕ ಆಸ್ಟ್ರೇಲಿಯಾ ಓಪನ್ ನಿಂದ ಹೊರ ಬಿದ್ದಿದ್ದಾರೆ.
ಉಳಿದಂತೆ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸಮೀರ್ ವರ್ಮ 16-21,21-7, 13-21 ರಿಂದ ಚೈನೀಸ್ ತೇಪಿಯ ವಾಂಗ್ ಜು ವಿ ವಿರುದ್ಧ ಒಂದು ಗಂಟೆಯ ಹೋರಾಟದಲ್ಲಿ ಸೋಲು ಅನುಭವಿಸಿದರು. ಸಾಯಿ ಪ್ರಣೀತ್ ಅವರ ಮುನ್ನಡೆ ಆಸೆಗೆ ಇಂಡೋನೇಷಿಯಾದ ಆಟಗಾರ ಬ್ರೇಕ್ ಹಾಕಿದರು.
ಪುರುಷರ ಡಬಲ್ಸ್ ಪಂದ್ಯದಲ್ಲೂ ಸ್ವಸ್ತಿಕ್ ರಾಜ್ ಹಾಗೂ ಚಿರಾಗ್ ಶೆಟ್ಟಿ 19-21, 18-21 ರಿಂದ ಚೀನಾದ ಲು ಜುನ್ ಹ್ಯೂ ಹಾಗೂ ಯುಚೇನ್ ವಿರುದ್ಧ ನಿರಾಸೆ ಅನುಭವಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!