ಕ್ರೀಡೆ

ಅಂದು ಕ್ರಿಕೆಟ್ ಆಟಗಾರ್ತಿಯಾದವಳಿಗೆ ಇಂದು ಫ್ರೆಂಚ್ ಓಪನ್ ಕಿರೀಟ! ಆಶ್ಲೆ ಬಾರ್ಟೆಗೆ ಚೊಚ್ಚಲ ಗ್ರ್ಯಾಂಡ್ ಸ್ಲಾಂ ಗರಿ

Raghavendra Adiga
ಪ್ಯಾರೀಸ್: ಆಸ್ಟ್ರೇಲಿಯನ್ ಆಟಗಾರ್ತಿ ಆಶ್ಲೆ ಬಾರ್ಟೆ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಬಾರ್ಟೆ ಅವರಿಗೆ ಇದು ಚೊಚ್ಚಲ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಯಾಗಿದ್ದರೆ ಆಸ್ಟ್ರೇಲಿಯಾಗೆ 46 ವರ್ಷಗಳ ನಂತರ ಒಲಿದ ಫ್ರೆಂಚ್ ಓಪನ್ ಕಿರೀಟವಾಗಿದೆ.
ಫೈನಲ್ಸ್ ನಲ್ಲಿ ಬಾರ್ಟೆ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೌಸೊವಾ ಅವರನ್ನು  6-1, 6-3 ರಿಂದ ಮಣಿಸಿ ಈ ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ ಬಾರ್ಟೆ ಮಾಜಿ ಕ್ರಿಕೆಟ್ ಆಟಗಾರ್ತಿಯಾಗಿದ್ದು ಆಸ್ಟೇಲಿಯಾ ಮಹಿಳಾ ಕ್ರಿಕೆಟ್ ಲೀಗ್ ಇಗ್ ಬ್ಯಾಶ್ ಟೂರ್ನಿಯ ಬ್ರಿಸ್ಟೇನ್ ಹೀಟ್ ತಂಡದ ಪರವಾಗಿ ಆಟವಾಡಿದ್ದರು. 
ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಆಸ್ಟ್ರೇಲಿಯಾ ಆಟಗಾರ್ತಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದರು. ಎದುರಾಳಿಗೆ ಅಂಕ ಗಳನ್ನು ನೀಡದಂತೆ ತಡೆದ ಬರ್ಟಿ, ಮೊದಲ ಬಾರಿಗೆ ಗ್ರ್ಯಾನ್ ಸ್ಲ್ಯಾಮ್ ಎತ್ತಿ ಸಂಭ್ರಮಿಸಿದರು. 
SCROLL FOR NEXT