ಹಿರೋಷಿಮಾ: ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಜಪಾನ್ ದೇಶವನ್ನು 3-1 ಗೋಲುಗಳಿಂದ ಭಾರತದ ಮಹಿಳಾ ಹಾಕಿ ತಂಡ ಮಣಿಸಿದೆ.
ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಲ್ ಮೂರನೇ ನಿಮಿಷದಲ್ಲಿ ಗೋಲ್ ಪಡೆದರು. ಆದರೆ, 11ನೇ ನಿಮಿಷದಲ್ಲಿ ಜಪಾನಿನ ಕಾನೊನ್ ಮೊರಿ ಗೋಲ್ ಗಳಿಸುವ ಮೂಲಕ ಸಮಬಲ ತಂದರು.
45 ಹಾಗೂ 60ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸುವ ಮೂಲಕ ಭಾರತದ ವನಿತೆಯರು 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದರು.
ವಿಶ್ವ ಕ್ರಮಾಂಕದಲ್ಲಿ 9 ನೇ ಸ್ಥಾನದಲ್ಲಿರುವ ಭಾರತ ನಿನ್ನೆ ನಡೆದ ಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಸೆಮಿಫೈನಲ್ ಪಂದ್ಯವನ್ನು ಗೆದ್ದು ಒಲಿಪಿಂಕ್ಸ್ ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos