ಅಝ್ಲಾನ್ ಷಾ ಹಾಕಿ: ಪೋಲೆಂಡ್ ವಿರುದ್ಧ ಭಾರತಕ್ಕೆ 10-0 ಅಂತರದ ಭರ್ಜರಿ ಜಯ 
ಕ್ರೀಡೆ

ಅಝ್ಲಾನ್ ಷಾ ಹಾಕಿ: ಪೋಲೆಂಡ್ ವಿರುದ್ಧ ಭಾರತಕ್ಕೆ 10-0 ಅಂತರದ ಭರ್ಜರಿ ಜಯ

ಅದ್ಭುತ ಫಾರ್ಮ್ ಮೂಲಕ ಅಝ್ಲಾನ್ ಶಾ ಹಾಕಿ ಪಂದ್ಯಾವಳ್ಳಿಯ ಫೈನಲ್ಸ್ ತಲುಪಿರುವ ಮನದೀಪ್ ಪಡೆ ಶುಕ್ರವಾರ ನಡೆದ ಕಡೆಯ ಲೀಗ್ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ 10-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ.

ಐಫಾ: ಅದ್ಭುತ ಫಾರ್ಮ್ ಮೂಲಕ ಅಝ್ಲಾನ್ ಶಾ ಹಾಕಿ ಪಂದ್ಯಾವಳ್ಳಿಯ ಫೈನಲ್ಸ್ ತಲುಪಿರುವ ಮಂದೀಪ್ ಪಡೆ ಶುಕ್ರವಾರ ನಡೆದ ಕಡೆಯ ಲೀಗ್ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ 10-0 ಗೋಲುಗಳ ಭರ್ಜರಿ ಜಯ ಸಾಧಿಸಿದೆ.
ಮಲೇಷಿಯಾದಲ್ಲಿ ನಡೆಯುತ್ತಿರುಇವ ಮಂದೀಪ್ ಸಿಂಗ್ ಅವಳಿ ಗೋಲುಗಳನ್ನು ದಾಖಲಿಸಿ ಗಮನ ಸೆಳೆದರು.ಪಂದ್ಯದ ಪ್ರಥಮಾರ್ಧದಲ್ಲಿ ಆರು ಹಾಗೂ ದ್ವಿತೀಯಾರ್ಧದಲ್ಲಿ ನಾಲ್ಕು ಗೋಲು ಗಳಿಸಿದ ಭಾರತ ಎದುರಾಳಿ ಪೋಲೆಂಡ್ ಗೆ ಒಂದೂ ಗೋಲು ಗಳಿಸುವ ಅವಕಾಶವನ್ನೇ ನೀಡಲಿಲ್ಲ.
ಮಂದೀಪ್ ಸಿಂಗ್ 50, 51ನೇ ನಿಮಿಷಗಳಲ್ಲಿ ಗೋಲು ಗಳಿಸಿದ್ದರೆ ವರುಣ್ ಕುಮಾರ್ 18 ಹಾಗೂ 25ನೇ ನಿಮಿಷಗಳಲ್ಲಿ ಗೋಲು ದಾಖಲಿಸ್ದ್ದರು. ಇನ್ನು ವಿವೇಕ್ ಸಾಗರ್ ಪ್ರಸಾದ್ (1ನೇ ನಿಮಿಷ), ಸುಮಿತ್ ಕುಮಾರ್ (7ನೇ ನಿಮಿಷ(, ಸುರೇಂದರ್ ಕುಮಾರ್ (19ನೇ ನಿಮಿಷ), ಸಿಮ್ರಾನ್ ಜೀತ್ ಸಿಂಗ್ (29tನೇ ನಿಮಿಷ), ನೀಲಕಂಠ ಶರ್ಮಾ (36ನೇ ನಿಮಿಷ), ಹಾಗೂ ಅಮಿತ್ ರೋಹಿತ್ ದಾಸ್ (55ನೇ ನಿಮಿಷ) ದಲ್ಲಿ ಗೋಲು ದಾಖಲಿಸಿ ಭಾರತದ ಭರ್ಜರಿ ಜಯಕ್ಕೆ ಕಾರಣರಾದರು.
ಇದಕ್ಕೆ ಮುನ್ನ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 7-3  ಅಂತರದ ಜಯ ಸಾಧಿಸಿತ್ತು. ಒಟ್ಟಾರೆ ಸರಣಿಯಲ್ಲಿ ಈ ವರೆಗೆ ನಡೆದ ಐದು ಪಂದ್ಯದಲ್ಲಿ ನಾಲ್ಕು ಜಯ, ಒಂದು ಡ್ರಾ ಸಾಧಿಸಿ ಭಾರತ ಫೈನಲ್ ಪ್ರವೇಶಿಸಿದೆ.
ಹಾಕಿ ಪಂದ್ಯಾವಳಿಯ ಫೈನಲ್ಸ್ ಹಣಾಹಣಿ ನಾಳೆ (ಮಾರ್ಚ್ ೩೦) ನಡೆಯಲಿದ್ದು ಪ್ರಶಸ್ತಿಗಾಗಿ ಭಾರತ ಪಡೆ ದ. ಕೊರಿಯಾವನ್ನು ಎದುರಿಸಬೇಕಿದೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!