ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡಬ್ಲ್ಯುಟಿಎ ಕಿರೀಟ ಮುಡುಗೇರಿಸಿಕೊಂಡ ಆ್ಯಶ್ಲೆ ಬಾರ್ಟಿ

ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಹಾಲಿ ಚಾಂಪಿಯನ್ ಎಲೀನಾ ಸ್ವಿಟೋಲಿನಾ ಅವರ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಮುಡುಗೇರಿಸಿಕೊಂಡರು.

ಆ್ಯಶ್ಲಿ ಬಾರ್ಟಿ
Vishwanath S
Updated On : 4 Nov 2019, 12:56 am

ಶೆಂಜಾನ್: ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಹಾಲಿ ಚಾಂಪಿಯನ್ ಎಲೀನಾ ಸ್ವಿಟೋಲಿನಾ ಅವರ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಮುಡುಗೇರಿಸಿಕೊಂಡರು. 

ಭಾನುವಾರ ಒಂದು ಗಂಟೆ 26 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಾರಮ್ಯ ಸಾಧಿಸಿದ ವಿಶ್ವದ ಅಗ್ರ ಶ್ರೇಯಾಂಕಿತೆ ಬಾರ್ಟಿ, 6-4, 6-3 ಅಂತರದಲ್ಲಿ  ಸ್ವಿಟೋಲಿನಾ ಅವರನ್ನು ಮಣಿಸಿ ವೃತ್ತಿ ಜೀವನದ ಚೊಚ್ಚಲ ಡಬ್ಲ್ಯುಟಿಎ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಲ್ಲದೇ, 1976ರ ಬಳಿಕ ಈ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾ ಟೆನಿಸ್ ಆಟಗಾರ್ತಿ ಎಂಬ ಸಾಧನೆಗೂ ಭಾಜನರಾದರು.

ಎಲೀನಾ ಸ್ವಿಟೋಲಿನಾ ವಿರುದ್ಧ ಕಳೆದ ಐದು ಪ್ರಯತ್ನಗಳಲ್ಲಿ ಆ್ಯಶ್ಲಿ ಬಾರ್ಟಿ ಗೆದ್ದು ಪ್ರಭುತ್ವ ಸಾಧಿಸಿದ್ದಾರೆ. ಅದರಂತೆ ಭಾನುವಾರ ನಡೆದ ಪಂದ್ಯದಲ್ಲಿ ವಿಶ್ವಾಸದಿಂದ ಕಣಕ್ಕೆ ಇಳಿದ ಬಾರ್ಟಿ ಅದ್ಭುತ ಪ್ರದರ್ಶನ ತೋರಿದರು. ಇದರ ಫಲವಾಗಿ ಮೊದಲನೇ ಸೆಟ್ ನಲ್ಲಿ 6-4 ಹಾಗೂ ಎರಡನೇ ಸೆಟ್ ನಲ್ಲಿ 6-3 ಅಂತರದಲ್ಲಿ ನೇರ ಸೆಟ್ ಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡರು.

Advertisement

Advertisement

ಮಹಿಳಾ ಡಬಲ್ಸ್ ವಿಭಾಗದಲ್ಲಿ ಟೈಮಾ ಬಾಬೋಸ್ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್ ಜೋಡಿಯು ಫೈನಲ್ ಹಣಾಹಣಿಯಲ್ಲಿ ಬಾರ್ಬೊರಾ ಸ್ಟ್ರೈಕೋವಾ ಮತ್ತು ಹ್ಸೀಹ್ ಸು-ವೀ ವಿರುದ್ಧ  6-1, 6-3 ಅಂತರದಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಡಬಲ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement