ರಾಫೆಲ್ ನಡಾಲ್ 
ಕ್ರೀಡೆ

ಎಟಿಪಿ ರ್ಯಾಂಕಿಂಗ್: ಜೊಕೊವಿಚ್  ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದ ರಫೇಲ್ ನಡಾಲ್

ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಪ್ಯಾರೀಸ್: ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರ ನಡೆದ ಸ್ಪೇನ್ ನ ರಫೇಲ್ ನಡಾಲ್ ಅವರು 12 ತಿಂಗಳು ಬಳಿಕ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ್ದಾರೆ.

ನಡಾಲ್ ಅವರು ಕಳೆದ ವರ್ಷ ನವಂಬರ್ 4 ರಂದು ಅಗ್ರ ಶ್ರೇಯಾಂಕ ಅಲಂಕರಿಸಿದ್ದರು. ಇದಾದ ಸರಿಯಾಗಿ ಒಂದು ವರ್ಷದ ಬಳಿಕ ನಡಾಲ್ ಅವರು ನಂಬರ್ 1 ಸ್ಥಾನಕ್ಕೆ ಏರಿದ್ದಾರೆ. ವಿಶ್ವದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಚ್ ಅವರು ಪ್ಯಾರೀಸ್ ಮಾಸ್ಟರ್ಸ್ ಚಾಂಪಿಯನ್ ಆಗಿ ಐದು ಬಾರಿ ಹೊರ ಹೊಮ್ಮಿದರು. ಆದರೂ ನಂಬರ್ 1 ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ನಡಾಲ್ ಈ ಹಿಂದೆ 2008, 2010, 2013 ಮತ್ತು 2017 ರಲ್ಲಿ ಪ್ರಥಮ ಸ್ಥಾನದೊಂದಿಗೆ ವರ್ಷವನ್ನು ಮುಗಿಸಿದ್ದರು. ಎಟಿಪಿ ಫೈನಲ್‌ನಲ್ಲಿ ನಡಾಲ್ ಪ್ರಥಮ ಸ್ಥಾನದಲ್ಲಿದ್ದರೆ. 2008 ರ ಆಗಸ್ಟ್ 18 ರಂದು 22 ನೇ ವಯಸ್ಸಿನಲ್ಲಿ ಸ್ಪೇನ್‌ನ ನಡಾಲ್ ಮೊದಲ ಬಾರಿಗೆ ಪ್ರಥಮ ಸ್ಥಾನ ಗಳಿಸಿದರು. ಅಲ್ಲದೆ ಅವರು 46 ವಾರಗಳಲ್ಲಿ ಅಗ್ರಸ್ಥಾನದಲ್ಲಿದ್ದರು. 2010–11ರಲ್ಲಿ 56, 2013–2014ರಲ್ಲಿ 39, 2017–18ರಲ್ಲಿ 26 ವಾರಗಳು, ಏಪ್ರಿಲ್‌ನಲ್ಲಿ ಆರು ವಾರಗಳು - 2018 ರಲ್ಲಿ ಮೇ, ನಾಲ್ಕು ವಾರಗಳು ಮೇ - ಜೂನ್‌ನಲ್ಲಿ ಮತ್ತು ಜೂನ್ - ನವೆಂಬರ್‌ನಲ್ಲಿ 19 ವಾರಗಳ ಕಾಲ್ ಅಗ್ರ ಸ್ಥಾನದಲ್ಲಿದ್ದರು.

ಸದ್ಯ ನಡಾಲ್ ಅವರು 9585 ಅಂಕಗಳನ್ನು ಕಲೆ ಹಾಕಿದ್ದಾರೆ. ಜೋಕೊ 8945 ಅಂಕಗಳೊಂದಿಗೆ ಎರಡನೇ ಹಾಗೂ ರೋಜರ್ ಫೆಡರರ್ 6190 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT