ಕ್ರೀಡೆ

ಆರಂಭಿಕ ಸುತ್ತಿನಲ್ಲೇ ಪಿ ವಿ ಸಿಂಧುಗೆ ಆಘಾತ: ಚೀನಾ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಪೈ ಯು ಪೊ ಎದುರು ಸೋಲು 

Sumana Upadhyaya

ಫಜೌ: ಚೀನಾದ ಫುಜಿಯನ್ ಪ್ರಾಂತ್ಯದ ಫಜೌ ರಾಜಧಾನಿಯಲ್ಲಿ ಮಂಗಳವಾರ ನಡೆದ ಚೀನಾ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ತಮಗಿಂತ ಕೆಳ ರ್ಯಾಂಕಿನ ಚೀನಾದ ತೈಪೆಯ ಆಟಗಾರ್ತಿ ಪೈ ಯು ಪೊ ಅವರ ಎದುರು ಸೋಲುವ ಮೂಲಕ ವಿಶ್ವ ಚ್ಯಾಂಪಿಯನ್ ಪಿ ವಿ ಸಿಂಧು ಆಘಾತಕಾರಿ ಸೋಲು ಅನುಭವಿಸಿದ್ದಾರೆ.


ವಿಶ್ವದ ನಂಬರ್ 6ನೇ ಆಟಗಾರ್ತಿ ಪಿ ವಿ ಸಿಂಧು ವಿಶ್ವದ ನಂಬರ್ 42ನೇ ರ್ಯಾಂಕಿಂಗ್ ಆಟಗಾರ್ತಿ ಪೈ ವಿರುದ್ಧ 74 ನಿಮಿಷಗಳ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 13-21, 21-18, 19-21 ಅಂತರದಲ್ಲಿ ಸೋಲನ್ನು ಕಂಡರು.


ಅದಾಗಿಯೂ ಮಿಶ್ರ ಡಬಲ್ಸ್ ನಲ್ಲಿ ವಿಶ್ವದ 30ನೇ ರ್ಯಾಂಕಿಂಗ್ ನ ಸತ್ವಿಕ್ಸೈರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಕೆನಡಾದ ಜೋಶುವಾ ಹರ್ಲ್‌ಬರ್ಟ್-ಯು ಮತ್ತು ಜೋಸೆಫೀನ್ ವು ಅವರನ್ನು 21-19, 21-19 ಅಂತರದಿಂದ ಸೋಲಿಸಿದ್ದಾರೆ.


ಪುರುಷರ ಸಿಂಗಲ್ಸ್ ನಲ್ಲಿ ಹೆಚ್ ಎಸ್ ಪ್ರನ್ನೊಯ್ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್ ನ ರಾಸ್ಮಸ್ ಜೆಮ್ಕೆ ವಿರುದ್ಧ 17-21, 18-21 ಅಂತರದಿಂದ ಸೋಲನ್ನು ಕಂಡಿದ್ದಾರೆ.

SCROLL FOR NEXT