ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸೈನಾಗೆ ಸೋಲಿನ ಆಘಾತ, ಕಶ್ಯಪ್ ಗೆ ಗೆಲುವಿನ ಸಿಂಚನೆ
ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ.
ಫಝೌ: ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ನಂಬರ್ 1 ಆಟಗಾರ್ತಿ ಸೈನಾ 9-21, 12-21 ರಿಂದ ಚೀನಾದ ಕಾಯ್ ಯಾನ್ ಯಾನ್ ವಿರುದ್ಧ 24 ನಿಮಿಷದ ಕಾದಾಟದಲ್ಲಿ ಸೋಲು ಕಂಡರು. ಸೈನಾ ಹಾಗೂ ಕಾಯ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು.
ಪಂದ್ಯದ ಪ್ರಾರಂಭದಿಂದ ಸೈನಾ ಅವರ ಆಟವನ್ನರಿತು ಆಡಿದ ಎದುರಾಳಿ ಆಟಗಾರ್ತಿ ಅಂಕಗಲನ್ನು ಕಲೆ ಹಾಕುತ್ತಾ ಸಾಗಿದ್ದರು. ಅಲ್ಲದೆ ಸುಲಭವಾಗಿ ಯಾವ ಹಂತದಲ್ಲೂ ಸೈನಾ ಅಂಕ ಗಳಿಸಲು ಬಿಡಲಿಲ್ಲ. ಇದರಿಂದ ಎರಡು ನೇರ ಸೆಟ್ ಗಳಲ್ಲಿ ಭಾರತೀಯ ಆಟಗಾರ್ತಿ ಸೋಲು ಅನುಭವಿಸಿದ್ದಾರೆ.
ಇದೇ ವೇಳೆ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್21-14, 21-13ನಿಂದ ಥಾಯ್ ಲ್ಯಾಂಡಿನ ಸಿತಿಕೋಮ್ ಥಮ್ಮಸಿನ್ ವಿರುದ್ಧ ಗೆಲುವಿನ ನಗು ಬೀರಿದ್ದಾರೆ. ಅಲ್ಲದೆ ಮಿಶ್ರ ಡಬಲ್ಸ್ ನಲ್ಲಿ ಪ್ರಣವ್ ಚೋಪ್ರಾ, ಸಿಕ್ಕಿ ರೆಡ್ಡಿ ಜೋಡಿಗೆ ಆಘಾತವಾಗಿದೆ.
Related Article
ಆರಂಭಿಕ ಸುತ್ತಿನಲ್ಲೇ ಪಿ ವಿ ಸಿಂಧುಗೆ ಆಘಾತ: ಚೀನಾ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಪೈ ಯು ಪೊ ಎದುರು ಸೋಲು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.