ಹಾಂಕಾಂಗ್ ಓಪನ್: ಮೊದಲ ಸುತ್ತಿನಲ್ಲೇ ಸೈನಾ, ಸಮೀರ್ ವರ್ಮಾಗೆ ಆಘಾತ 
ಕ್ರೀಡೆ

ಹಾಂಕಾಂಗ್ ಓಪನ್: ಮೊದಲ ಸುತ್ತಿನಲ್ಲೇ ಸೈನಾ, ಸಮೀರ್ ವರ್ಮಾಗೆ ಆಘಾತ 

ಭಾರತದಿಂದ ಪ್ರಶಸ್ತಿ ಗೆಲ್ಲುವ ಸಂಭಾವ್ಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದ ಸೈನಾ ನೆಹ್ವಾಲ್ ಮತ್ತು  ಸಮೀರ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲನೇ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ.

ಹಾಂಕಾಂಗ್: ಭಾರತದಿಂದ ಪ್ರಶಸ್ತಿ ಗೆಲ್ಲುವ ಸಂಭಾವ್ಯ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದ ಸೈನಾ ನೆಹ್ವಾಲ್ ಮತ್ತು  ಸಮೀರ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲನೇ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಕಠಿಣ ಹೋರಾಟದ ನಡೆವೆಯೂ ಸೈನಾ ನೆಹ್ವಾಲ್ ಅವರು 13-21, 20-22 ಅಂತರದ ನೇರ ಸೆಟ್‍ಗಳಿಂದ ಚೀನಾದ ಚೈ ಯಾನ್ ಯಾನ್ ವಿರುದ್ಧ ಸೋಲು ಅನುಭವಿಸಿದರು.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ತೋರಿದ ಚೀನಾದ ಆಟಗಾರ್ತಿ, ಭಾರತದ ಆಟಗಾರ್ತಿಗೆ ಪುಟಿದೇಳಲು ಅವಕಾಶ ನೀಡಲೇ ಇಲ್ಲ. ಮೊದಲನೇ ಸೆಟ್ ಸೋತ ಬಳಿಕ ಸೈನಾ, ಎರಡನೇ ಸೆಟ್‍ನಲ್ಲಿ ಚೈ ಯಾನ್ ಯಾನ್‍ಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದರು. ಆದರೆ, ಅಂತಿಮವಾಗಿ ಕೇವಲ ಎರಡು ಅಂಕಗಳ ಅಂತರದಲ್ಲಿ ನೆಹ್ವಾಲ್ ಎರಡನೇ ಸೆಟ್ ಬಿಟ್ಟು ಕೊಟ್ಟರು.

ಇನ್ನೊಂದೆಡೆ ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನ ಪಂದ್ಯದಲ್ಲಿ ಕಠಿಣ ಹೋರಾಟದ ನಡುವೆಯೂ ಸಮೀರ್ ವರ್ಮಾ ಅವರು 11-21, 21-13, 8-21 ಅಂತರದಲ್ಲಿ ತೈವಾನ್‍ನ ವಾಂಗ್ ಟಿಜು ವೀ ವಿರುದ್ಧ ಸೋತು ಆಘಾತ ಅನುಭವಿಸಿದರು.

ಮೊದಲನೇ ಸೆಟ್‍ನಲ್ಲಿ ಸೋಲು ಅನುಭವಿಸಿದ್ದ ಸಮೀತ್ ವರ್ಮಾ, ಎರಡನೇ ಸೆಟ್‍ನಲ್ಲಿ ಪುಟಿದೇಳುವ ಮೂಲಕ ತೈವಾನ್ ಆಟಗಾರನಿಗೆ ತಿರುಗೇಟು ನೀಡಿದರು. ನಂತರ, ಮೂರನೇ ಹಾಗೂ ನಿರ್ಣಾಯಕ ಸೆಟ್‍ನಲ್ಲಿ ಎಚ್ಚೆತ್ತುಕೊಂಡ ವಾಂಗ್ ಟಿಜು, ಭಾರತದ ಆಟಗಾರನನ್ನು ಕೇವಲ ಎಂಟು ಅಂಕಗಳಿಗೆ ಕಟ್ಟಿ ಹಾಕಿ ಪಂದ್ಯ ತನ್ನದಾಗಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ