ಕ್ರೀಡೆ

ಮಿಕ್ಸಡ್ ಮಾರ್ಷಲ್ ಆಟ್ರ್ಸ್ ಗೆ ರಿತು ಫೋಗಟ್ ಪದಾರ್ಪಣೆ

Raghavendra Adiga

ನವದೆಹಲಿ:  ಭಾರತದ ಕುಸ್ತಿಪಟು ರಿತು ಫೋಗಟ್ ಅವರು ನ. 16 ರಂದು ಕೊರಿಯಾದ ನಮ್ ಹೀ ಕಿಮ್ ವಿರುದ್ಧ ಸೆಣಸುವ ಮೂಲಕ ಮಿಕ್ಸಡ್ ಮಾರ್ಷಲ್ ಆಟ್ರ್ಸ್ (ಎಂಎಂಎ) ಪದಾರ್ಪಣೆ ಮಾಡುತ್ತಿದ್ದಾರೆ. ಚೀನಾದ ಬೀಜಿಂಗ್ ನಲ್ಲಿ ಇವರಿಬ್ಬರ ನಡುವಿನ ಪಂದ್ಯ ನಡೆಯಲಿದೆ.

ಈ ಬಗ್ಗೆ ಪ್ರತಿಕ್ರಿಯಸಿದ ರಿತು ಫೋಗಟ್, " ಮಿಕ್ಸಡ್ ಮಾರ್ಷಲ್ ವಿಶ್ವ ಚಾಂಪಿಯನ್ ಆಗಬೇಕೆಂಬ ಗುರಿ ಹೊಂದಿದ್ದೇನೆ. ಅದಕ್ಕಾಗಿ ತುಂಬಾ ದಿನಗಳಿಂದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದೇನೆ. ಮಿಕ್ಸಡ್ ಮಾರ್ಷಲ್ ಗೆದ್ದ ಮೊದಲ ಭಾರತೀಯ ಮಹಿಳಾಕುಸ್ತಿಪಟು ಆಗಬೇಕು ಎಂಬ ಬಯಕೆ ಹೊಂದಿದ್ದೇನೆ." ಎಂದು ಅವರು ಹೇಳಿದರು.

"ದೇಶವನ್ನು ಪ್ರತಿನಿಧಿಸುವಲ್ಲಿ ನಾನು ಹೆಮ್ಮೆ ಪಡುತ್ತೇನೆ. ನಾನು ಹಲವು ಮಹಿಳೆಯರಿಗೆ ಪ್ರೇರಣೆಯಾಗಬೇಕು. ಆದ್ದರಿಂದ ತುಂಬು ಹೃದಯದಿಂದ ಈ ಸ್ಪರ್ಧೆಗೆ ಧುಮುಕುತ್ತಿದ್ದೇನೆ." ಎಂದರು.

ಫೋಗಟ್ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತರಾಗಿದ್ದು  ವಿಶ್ವ ಅಂಡರ್ 23 ಕುಸ್ತಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತರೂ ಆಗಿದ್ದಾರೆ. ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ ಕಂಚಿನ ಪದಕ,  ಬಹು ಬಾರಿ ಭಾರತೀಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

SCROLL FOR NEXT