ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಹೈಜಂಪ್ ನಲ್ಲಿ ಶರದ್ ಗೆ ಬೆಳ್ಳಿ, ಮರಿಯಪ್ಪನ್ ಗೆ ಕಂಚು

Raghavendra Adiga

ದುಬೈ: ದುಬೈನಲ್ಲಿ ನಡೆಯಲಿರುವ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ನಂತರ ಭಾರತದ ಪ್ರಸಿದ್ಧ ಪ್ಯಾರಾ ಹೈ-ಜಿಗಿತಗಾರರಾದ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಮುಂದಿನ ವರ್ಷದ ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ಎರಡು ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್ ಚಾಂಪಿಯನ್ ಶರದ್ ಕುಮಾರ್  1.83 ಮೀಟರ್ ಎತ್ತರ ಜಿಗಿದು ಗುರಿ ಸಾಧಿಸಿದ್ದರು. ದರೆ ರಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ 1.80 ಮೀಟರ್ಎತ್ತರ ಜಿಗಿದು ಕಂಚಿನ ಪದಕ ಗಳಿಸಿದ್ದಾರೆ.

ಇದೇ ವಿಬಾಗದಲ್ಲಿ 1.86 ಮೀಟರ್ ಜಿಗಿಯುವ ಮೂಲಕ ಚಾಂಪಿಯನ್‌ಶಿಪ್ ದಾಖಲೆಯೊಂದಿಗೆ ಅಗ್ರ ಗೌರವ ಪಡೆದ  ಸ್ಯಾಮ್ ಗ್ರೀವ್‌ಗೆ ಚಿನ್ನ ಒಲಿದಿದೆ.

"ಇಂದಿನ ನನ್ನ ಪ್ರದರ್ಶನ ನನಗೆ ನಿರಾಶೆಯನ್ನುಂಟು ಮಾಡಿದೆ. . ನಾನು ಕಳೆದ ಮೂರು ವರ್ಷಗಳಿಂದ ಉಕ್ರೇನ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು ಉತ್ತಮ ಪ್ರದರ್ಶನ ನೀಡಬೇಕಾಗಿತ್ತು. ನನ್ನ ವೇಳಾಪಟ್ಟಿ, ನನ್ನ ಯೋಜನೆ ಮತ್ತು ಇನ್ನೂ ಅನೇಕ ವಿಷಯಗಳನ್ನು ನಾನು ಮರುಪರಿಶೀಲಿಸಬೇಕಾಗಿದೆ ”ಎಂದು ಭಾರತದ ಪ್ಯಾರಾಲಿಂಪಿಕ್ ಆಟಗಾರ ಶರದ್ ಹೇಳಿದ್ದಾರೆ.

SCROLL FOR NEXT