ಭಾರತದ ಆಟಗಾರರು 
ಕ್ರೀಡೆ

ಫುಟ್ಬಾಲ್ : ಓಮನ್ ವಿರುದ್ಧ ಭಾರತಕ್ಕೆ 1-0 ಅಂತರದಲ್ಲಿ ಸೋಲು

ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ  ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್ ಅರ್ಹತೆ ಪಡೆಯುವ ಸುನೀಲ್ ಚೆಟ್ರಿ ಪಡೆಯ ಹಾದಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ.

ಮಸ್ಕತ್ :  ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ  ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್ ಅರ್ಹತೆ ಪಡೆಯುವ ಸುನೀಲ್ ಚೆಟ್ರಿ ಪಡೆಯ ಹಾದಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ.

ಇಲ್ಲಿನ ಸುಲ್ತಾನ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಅಲ್ ಘಸ್ಸಾನಿ (33ನೇ ನಿ.) ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಓಮನ್ ತಂಡ 1-0 ಅಂತರದಲ್ಲಿ ಭಾರತದ ವಿರುದ್ಧ ಗೆಲುವಿನ ನಗೆ ಬೀರಿತು. ಗೆಲುವಿನೊಂದಿಗೆ ಓಮನ್ ತನ್ನ ಖಾತೆಗೆ ಮೂರು ಅಂಕಗಳನ್ನು ಪಡೆಯಿತು. 

ಒಟ್ಟಾರೆ 12 ಅಂಕಗಳೊಂದಿಗೆ ಓಮನ್ ‘ಇ ’ ಗುಂಪಿನ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು. ಅಗ್ರ ಸ್ಥಾನದಲ್ಲಿ 13 ಅಂಕಗಳೊಂದಿಗೆ ಕತಾರ್ ಇದೆ. ಕೇವಲ ಮೂರು ಅಂಕಗಳೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆದಿತ್ತು. ಇದರ ನಡುವೆ 24ನೇ ನಿಮಿಷದಲ್ಲಿ ಭಾರತದ ಆದಿಲ್ ಖಾನ್ ತಪ್ಪು ಎಸಗಿದ್ದರಿಂದ ಮ್ಯಾಚ್ ರೆಫರಿಯಿಂದ ಹಳದಿ ಕಾರ್ಡ್ ಪಡೆದುಕೊಂಡರು. ನಂತರ, ಚೆಂಡಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಓಮನ್ ಮೊದಲ ಅವಧಿಯಲ್ಲಿ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.

 33ನೇ ನಿಮಿಷದಲ್ಲಿ ಭಾರತ ರಕ್ಷಣಾ ವಿಭಾಗದಲ್ಲಿ  ಮಾಡಿದ ತಪ್ಪುಗಳನ್ನು ಸದುಪಯೋಗಪಡಿಸಿಕೊಂಡ ಎದುರಾಳಿ ತಂಡದ ಅಲ್ ಘಸ್ಸಾನಿ ಅವರು ಓಮನ್‌ಗೆ ಮೊದಲನೇ ಗೋಲು ತಂದುಕೊಟ್ಟರು. ಇದರೊಂದಿಗೆ ಮೊದಲನೇ ಅವಧಿಯಲ್ಲಿ ಓಮನ್ 1-0 ಮುನ್ನಡೆಯೊಂದಿಗೆ ಗೆಲುವು ಸಾಧಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel