ಕಿಡಂಬಿ ಶ್ರೀಕಾಂತ್ 
ಕ್ರೀಡೆ

ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್: 2ನೇ ಸುತ್ತಿಗೆ ಕಿಡಂಬಿ ಶ್ರೀಕಾಂತ್

ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಲಖನೌ: ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಆಟಗಾರ ರಷ್ಯಾದ ವ್ಲಾಡಿಮಿರ್ ಮಾಲ್ಕೋವ್ ಅವರ ವಿರುದ್ಧ 21-12, 21-11 ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಗೆದ್ದ ಶುಭಾರಂಭ ಮಾಡಿದ್ದಾಾರೆ. 

ಮತ್ತೊಂದು ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಫ್ರೆಂಚ್‌ಮನ್ ಲುಕಾಸ್ ಕಾರ್ವೆ ಅವರ ವಿರುದ್ಧ ಭಾರತದ ಮತೊರ್ವ ಆಟಗಾರ ಪರುಪಳ್ಳಿ ಕಶ್ಯಪ್ ಅವರಿಗೆ ವಾಕ್ ಓವರ್ ಸಿಕ್ಕಿದೆ. ಹಾಗಾಗಿ, ಅವರು ಅಂಗಳಕ್ಕೆ ಇಳಿಯದೆ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಕಳೆದ ವಾರ ಸ್ಕಾಟಿಷ್ ಓಪನ್ ಗೆದ್ದ 18ರ ಪ್ರಾಯದ ಲಕ್ಷ್ಯಸೇನ್ ಅವರು ಕೂಡ ಫ್ರೆಂಚ್ ಶಟ್ಲರ್ ಥಾಮಸ್ ರಾಕ್ಸೆಲ್ ಎದುರು ವಾಕ್ ಓವರ್ ಲಭಿಸಿತು.

ಇನ್ನೂ ಮಹಿಳೆಯರ ವಿಭಾಗದಲ್ಲಿ ಅಶ್ಮಿತಾ ಚಲಿಯಾ ಅವರು ವೃಶಾಲಿ ಗುಮ್ಮಾಡಿ ಅವರ ವಿರುದ್ಧ 21-16, 21-16 ಅಂತರದಲ್ಲಿ ಗೆಲುವು ಪಡೆದರು. ಆ ಮೂಲಕ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel