ಕ್ರೀಡೆ

ಚೆಸ್ ಶ್ರೇಯಾಂಕ: ಮೂರನೇ ಸ್ಥಾನಕ್ಕೇರಿದ ಕೋನೇರು ಹಂಪಿ

Lingaraj Badiger

ನವದೆಹಲಿ: ಇತ್ತೀಚೆಗೆ ಎಫ್‌ಐಡಿಇ ಬಿಡುಗಡೆ ಮಾಡಿದ ವಿಶ್ವ ಚೆಸ್ ಶ್ರೇಯಾಂಕದಲ್ಲಿ ಭಾರತದ ಮಹಿಳಾ ಚೆಸ್ ಆಟಗಾರ್ತಿ ಕೋನೇರು ಹಂಪಿ ಅವರು ಮೂರನೇ ಸ್ಥಾನಕ್ಕೇರಿದ್ದಾರೆ.

32ರ ಪ್ರಾಯದ ಆಂಧ್ರ ಪ್ರದೇಶದ ಕೋನೇರು ಹಂಪಿ ಅವರು ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿ ರಷ್ಯಾದ ಸ್ಕೋಲ್‌ಕೋವೊದಲ್ಲಿ ಮುಕ್ತಾಯವಾಗಿದ್ದ ಎಫ್‌ಐಡಿಇ ಮಹಿಳಾ ಗ್ರಾಂಡ್ ಪ್ರಿಕ್ಸ್‌ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಗ್ರಾಂಡ್ ಮಾಸ್ಟರ್ ಹಂಪಿ ಅವರು, 17 ಇಎಲ್‌ಒ ಪಾಯಿಂಟ್‌ಗಳೊಂದಿಗೆ 2,577 ಜಾಗತಿಕ ರೇಟಿಂಗ್‌ನೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇದಕ್ಕೂ ಮುನ್ನ ಕೋನೇರು ಹಂಪಿ ಅವರು ತಮಗೆ ಜನಿಸಿದ್ದ ಹೆಣ್ಣು ಮಗಳು ಅಹಾನ ಪಾಲನೆಗೋಸ್ಕರ ಎರಡು ವರ್ಷಗಳ ಕಾಲ ಚೆಸ್ ನಿಂದ ದೂರ ಉಳಿದಿದ್ದರು. ಚೀನಾದ ಹೌ ಯಿಫನ್ (2,659 ಪಾಯಿಂಟ್‌ಗಳು) ಹಾಗೂ ಜು ವೆಂಜುನ್ (2,586 ಪಾಯಿಂಟ್‌ಗಳು) ಅವರು ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನ ಪಡೆಡಿದ್ದಾರೆ.

ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ಆನಂದ್ ವಿಶ್ವನಾಥನ್ ಅವರು 2,765 ಅಂಕಗಳೊಂದಿಗೆ ಒಂಬತ್ತನೇ ಸ್ಥಾನ ಪಡೆದರೆ, ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರು 2,876 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.

SCROLL FOR NEXT