ನವೋಮಿ ಒಸಾಕ 
ಕ್ರೀಡೆ

ನವೋಮಿ ಒಸಾಕಗೆ ಚೀನಾ ಓಪನ್ ಗರಿ

ಮೊದಲನೇ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ನಂತರ ಪುಟಿದೆದ್ದ ಜಪಾನ್‌ನ ನವೋಮಿ ಒಸಾಕ ಅವರು ಫೈನಲ್ ಹಣಾಹಣಿಯಲ್ಲಿ ವಿಶ್ವ ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿ ವಿರುದ್ಧ ಗೆದ್ದು ಚೀನಾ ಓಪನ್ ಮುಡಿಗೇರಿಸಿಕೊಂಡರು.

ಬೀಜಿಂಗ್ : ಮೊದಲನೇ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ನಂತರ ಪುಟಿದೆದ್ದ ಜಪಾನ್‌ನ ನವೋಮಿ ಒಸಾಕ ಅವರು ಫೈನಲ್ ಹಣಾಹಣಿಯಲ್ಲಿ ವಿಶ್ವ ಅಗ್ರ ಶ್ರೇಯಾಂಕಿತೆ ಆ್ಯಶ್ಲೆ ಬಾರ್ಟಿ ವಿರುದ್ಧ ಗೆದ್ದು ಚೀನಾ ಓಪನ್ ಮುಡಿಗೇರಿಸಿಕೊಂಡರು.

ಇಂದು 110 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ ಫೈನಲ್ ಪಂದ್ಯದಲ್ಲಿ  ಕಠಿಣ ಹೋರಾಟ ನಡೆಸಿದ ನವೋಮಿ ಒಸಾಕ ಅವರು 3-6, 6-3, 6-2 ಅಂತರದಲ್ಲಿ ಆಸ್ಟ್ರೇಲಿಯಾದ ಆ್ಯಶ್ಲೆೆ ಬಾರ್ಟಿ ಅವರನ್ನು ಮಣಿಸಿ ಚೀನಾ ಓಪನ್ ಚಾಂಪಿಯನ್ ಆದರು.

ಪಂದ್ಯದ ಮೊದಲ ಸೆಟ್‌ನಲ್ಲಿ ಒಸಾಕ ಹಾಗೂ ಬಾರ್ಟಿ ಅವರ ವಿರುದ್ಧ ಭಾರಿ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಬಾರ್ಟಿ 6-3 ಅಂತರಲ್ಲಿ ಒಸಾಕ ಅವರನ್ನು ಮಣಿಸಿದರು. ನಂತರ, ಎಚ್ಚೆೆತ್ತುಕೊಂಡ ಒಸಾಕ ಅವರು ಮೊದಲನೇ ಸೆಟ್‌ನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆಡಿದರು. ಇದರ ಫಲವಾಗಿ ಎರಡನೇ ಸೆಟ್ ಅನ್ನು  6-3 ಅಂತರದಲ್ಲಿ ಜಪಾನ್ ಆಟಗಾರ್ತಿ ಗೆದ್ದರು. 

ತೀವ್ರ ಕುತೂಹಲ ಕೆರಳಿಸಿದ ಮೂರನೇ ಹಾಗೂ ಅಂತಿ ಸೆಟ್‌ನಲ್ಲಿ ಅದೇ ಲಯ ಮುಂದುವರಿಸಿದ 21ರ ಪ್ರಾಯದ ಒಸಾಕ 6-2 ಅಂತರದಲ್ಲಿ ಗೆದ್ದು ಚೀನಾ ಓಪನ್ ಪ್ರಶಸ್ತಿಗೆ ಚುಂಬಿಸಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT