ಕ್ರೀಡೆ

ಡೆನ್ಮಾರ್ಕ್ ಪಂದ್ಯಕ್ಕೆ ಹೋಗಲು ವೀಸಾ ಸಿಗದೆ ವಿದೇಶಾಂಗ ಸಚಿವಾಲಯ ಮೊರೆ ಹೋದ ಸೈನಾ ನೆಹ್ವಾಲ್ 

Sumana Upadhyaya

ನವದೆಹಲಿ; ಮುಂದಿನ ವಾರ ಡೆನ್ಮಾರ್ಕ್ ಮುಕ್ತ ಟೆನಿಸ್ ಪಂದ್ಯದಲ್ಲಿ ಭಾಗವಹಿಸಲಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ ವೀಸಾ ಸಮಸ್ಯೆ ಎದುರಾಗಿದೆ. ಹೀಗಾಗಿ ಸೈನಾ ಇದೀಗ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾರೆ.

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್  ಸೂಪರ್ 750 ಟೂರ್ನಮೆಂಟ್ ನಲ್ಲಿ ಪ್ರಮುಖ ಪಂದ್ಯವಾಗಿರುವ ಡೆನ್ಮಾರ್ಕ್ ಮುಕ್ತ ಬ್ಯಾಡ್ಮಿಂಟನ್ ಇದೇ ತಿಂಗಳ 15ರಿಂದ 20ರವರೆಗೆ ಡೆನ್ಮಾರ್ಕ್ ನ ಒಡೆನ್ಸ್ ನಲ್ಲಿ ನಡೆಯಲಿದೆ.

ಡೆನ್ಮಾರ್ಕ್ ಗೆ ಹೋಗಲು ನನಗೆ ಮತ್ತು ನನ್ನ ತರಬೇತುದಾರರಿಗೆ ತುರ್ತಾಗಿ ವೀಸಾದ ಅವಶ್ಯಕತೆಯಿದೆ. ಮುಂದಿನ ವಾರವೇ ಪಂದ್ಯಾವಳಿಯಿದ್ದು ಇನ್ನೂ ನಮಗೆ ವೀಸಾ ಸಿಕ್ಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಟ್ಯಾಗ್ ಮಾಡಿ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಇದೇ ಟೂರ್ನಮೆಂಟ್ ನಲ್ಲಿ ಅಂತಿಮ ಸುತ್ತಿನಲ್ಲಿ ಚೀನಾದ ತೈಪೆಯ ತೈ ತ್ಸು-ಯಿಂಗ್ ಅವರ ಎದುರು ಸೋತು ಸೈನಾ ನೆಹ್ವಾಲ್ ರನ್ನರ್ ಅಪ್ ಆಗಿದ್ದರು. 

SCROLL FOR NEXT