ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಂಡರ್-15 ಮಹಿಳಾ ಸ್ಯಾಫ್ ಫುಟ್ಬಾಲ್: ಬಾಂಗ್ಲಾ ಮಣಿಸಿದ ಭಾರತಕ್ಕೆ ಚಾಂಪಿಯನ್ ಪಟ್ಟ

ಭಾರತದ ಮಹಿಳಾ ಫುಟ್ಬಾಲ್ ತಂಡವು ಇಲ್ಲಿ ನಡೆದಿರುವ ಅಂಡರ್-15 ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್ ಫೈನಲ್ ನ ಶೂಟೌಟ್ ನಲ್ಲಿ 5-3 ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿದೆ.

ಅಂಡರ್-15 ಮಹಿಳಾ ಸ್ಯಾಫ್ ಫುಟ್ಬಾಲ್: ಭಾರತ ಚಾಂಪಿಯನ್
Raghavendra Adiga
Updated On : 16 Oct 2019, 10:22 am

ಥಿಂಪು (ಭೂತಾನ್): ಭಾರತದ ಮಹಿಳಾ ಫುಟ್ಬಾಲ್ ತಂಡವು ಇಲ್ಲಿ ನಡೆದಿರುವ ಅಂಡರ್-15 ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಶಿಪ್ ಫೈನಲ್ ನ ಶೂಟೌಟ್ ನಲ್ಲಿ 5-3 ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿದೆ.

ಎರಡೂ ತಂಡಗಳು ಆರಂಭದಲ್ಲಿ ಆಕ್ರಮಣಕಾರಿ ಆಟ ಆಡಿದವು. ಪಂದ್ಯದಲ್ಲಿ ಭಾರತಕ್ಕೆ ಪೆನಾಲ್ಟಿ ಶೂಟೌಟ್ ಅವಕಾಶ ಲಭಿಸಿದರೂ, ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಹೀಗಾಗಿ ಪಂದ್ಯದ ಫಲಿತಾಂಶ ಅರಿಯಲು ಶೂಟೌಟ್ ಮೊರೆ ಹೋಗಲಾಯಿತು.

ಶೂಟೌಟ್ ನಲ್ಲಿ ಭಾರತ ಐದು ಅವಕಾಶದಲ್ಲಿ ಗೋಲು ಬಾರಿಸಿ ಅಬ್ಬರಿಸಿತು. ಆದರೆ, ಎದುರಾಳಿ ತಂಡ ಮೂರು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಯ ದರ್ಶನ ಮಾಡಿಸಿತು. ಭಾರತದ ಪರ ಕೊನೆಯ ಗೋಲ್ ನಾಯಕಿ ಶಿಲ್ಕಿ ದೇವಿ ಬಾರಿಸಿದರು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement