ಪಂಕಜ್ ಅಡ್ವಾಣಿ 
ಕ್ರೀಡೆ

ಬಿಲಿಯರ್ಡ್ಸ್: ಪಂಕಜ್ ಅಡ್ವಾಣಿಗೆ ವಿಶ್ವ ಚಾಂಪಿಯನ್ ಪಟ್ಟ, ವಿಶ್ವವಿಜೇತನ ಮುಡಿಗೆ 22ನೇ ಜಾಗತಿಕ ಪ್ರಶಸ್ತಿ ಗರಿ

ಭಾರತದ ಹೆಮ್ಮೆಯ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಭಾನುವಾರ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ 150 ಅಪ್(Up)  ವಿಭಾಗದಲ್ಲಿ  ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆಯ 22 ನೇ ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಹೆಮ್ಮೆಯ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಭಾನುವಾರ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ 150 ಅಪ್ (Up) ವಿಭಾಗದಲ್ಲಿ  ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆಯ 22 ನೇ ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

34 ವರ್ಷ ವಯಸ್ಸಿನ ಪಂಕಜ್ 2014ರಿಂದ ಸತತವಾಗಿ ವಿಶ್ವ ಚಾಂಪಿಯನ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದಾರೆ.ಬಿಲಿಯರ್ಡ್ಸ್ ನ ಶಾರ್ಟ್ ಫಾರ್ಮ್ಯಾಟ್ ನಲ್ಲಿ ಪಂಕಜ್ ಅವರಿಗಿದು ಕಳೆದ ಆರು ವರ್ಷಗಳಲ್ಲಿ ಐದನೇ ಪ್ರಶಸ್ತಿಯಾಗಿದೆ.

ಮಯನ್ಮಾರ್ ನ ನೇ ಥ್ವೇ ಓಅವರ ವಿರುದ್ಧ 6-2 150(145)-4, 151(89)-66, 150(127)-50(50), 7-150(63,62), 151(50)-69(50), 150(150)-0, 133(64)-150(105), 150(74)-75(63). ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

"ಇದು ಟಚ್ ಆಂಡ್ ಗೋ ಫಾರ್ಮ್ಯಾಟ್ ನ ಪಂದ್ಯವಾಗಿದ್ದು ಈ ನಾಲ್ಕು ವರ್ಷಗಳಲ್ಲಿ ಸತತ ಚಾಂಪಿಯನ್ ಪಟ್ಟ ಹಾಗೆಯೇ ಕಳೆದ ಆರು ವರ್ಷಗಳಲ್ಲಿ  ಐದು ಪಂದ್ಯಗಳನ್ನು ಗೆಲ್ಲುವ ಸಾಧನೆ ನಿಜಕ್ಕೂ ವಿಶೇಷವಾಗಿದೆ"ಚಾಂಪಿಯನ್ ಕ್ರೀಡಾಪಟು ಪಂಕಜ್ ಹೇಳಿದ್ದಾರೆ.

ಬೆಂಗಳೂರು ಮೂಲದ ಪಂಕಜ್ ಅಡ್ವಾಣಿ  2003 ರಿಂದ ಜಾಗತಿಕ  ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಪ್ರಶಸ್ತಿ ಗೆಲ್ಲುವ ಭರವಸೆಯ ಆಟಗಾರನಾಇ ಮುಂದುವರಿಯುತ್ತಿದ್ದಾರೆ.ಇದೀಗ ಅಚ್ಚರಿಯೆಂಬಂತೆ  22 ನೇ ವಿಶ್ವ ಪ್ರಶಸ್ತಿಯನ್ನು ಗೆದ್ದ ಪಂಕಜ್, "ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಾಗಲೆಲ್ಲಾ ಒಂದು ವಿಷಯ ಸ್ಪಷ್ಟವಾಗುತ್ತದೆ -ಗೆಲುವು ನನ್ನ ಸ್ಪೂರ್ತಿಯನ್ನು ಕಸಿಯುವುದಿಲ್ಲ. ಗೆಲುವು ನನ್ನ ಹಸಿವು, ಆ ಬೆಂಕಿ ಎಂದಿಗೂ ಆರುವುದಿಲ್ಲ." ಎಂದರು.

ಇದೀಗ ಪಂಕಜ್ ಐಬಿಎಸ್ಎಫ್ ವರ್ಲ್ಡ್ ಸಿಕ್ಸ್-ರೆಡ್ ಸ್ನೂಕರ್ ಮತ್ತು ವರ್ಲ್ಡ್ ಟೀಂ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದು ಇದಕ್ಕಾಗಿ ತುರ್ತು ತಯಾರಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT