ನವದೆಹಲಿ: 22ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಪಂಕಜ್ ಅಡ್ವಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಮ್ಯಾನ್ಮಾರ್ನ ಮಾಂಡಲೆನಲ್ಲಿ ಭಾನುವಾರ ನಡೆದ ಐಬಿಎಸ್ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಅಡ್ವಾಣಿ ಮಯನ್ಮಾರ್ನ ನಾಯ್ ತ್ವೆ ಓ ಅವರನ್ನು 6-2ರಿಂದ ಸೋಲಿಸಿ 22ನೇ ವಿಶ್ವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. "ಪಂಕಜ್ ಅಡ್ವಾಣಿ ನಿಮಗೆ ಅಭಿನಂದನೆಗಳು. ನಿಮ್ಮ ಸಾಧನೆಯ ಬಗ್ಗೆ ಇಡೀ ರಾಷ್ಟ್ರ ಹೆಮ್ಮೆಪಡುತ್ತದೆ. ನಿಮ್ಮ ದೃಢತೆ ಶ್ಲಾಘನೀಯ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.