ಕ್ರೀಡೆ

ಸುಮಿತ್ ನಗಾಲ್ ಗೆ ಬ್ಯೂನಸ್ ಐರಿಸ್ ಚಾಲೆಂಜರ್ ಕಿರೀಟ

Raghavendra Adiga

ನವದೆಹಲಿ:  ನವದೆಹಲಿ: ಭಾನುವಾರ ಬ್ಯೂನಸ್ ಐರಿಸ್ ಎಟಿಪಿ ಚಾಲೆಂಜರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ವಿಶ್ವ ಶ್ರೇಯಾಂಕದಲ್ಲಿ 26 ಸ್ಥಾನಗಳು ಜಿಗಿದು 135ಕ್ಕೇರಿದ್ದಾರೆ.

ಭಾನುವಾರ ಕೇವಲ 37 ನಿಮಿಷಗಳ ಕಾಲ ನಡೆದಿದ್ದ ಬ್ಯೂನಸ್ ಐರಿಸ್ ಎಟಿಪಿ ಚಾಲೆಂಜರ್ ಫೈನಲ್ ಹಣಾಹಣಿಯಲ್ಲಿ ಅರ್ಜೆಂಟೀನಾದ ಫಕುಂಡೊ ಬಗ್ನೀಸ್ ಅವರ ವಿರುದ್ಧ 6-4, 6-2 ಅಂತರದಲ್ಲಿ ಗೆದ್ದು ಚಾಂಪಿಯನ್ ಆಗಿದ್ದರು. ಹಾಗಾಗಿ, ವೃತ್ತಿಪರ ಟೆನಿಸ್ ಅಸೋಸಿಯೇಷನ್ (ಎಟಿಪಿ) ಸೋಮವಾರ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ನಗಾಲ್ 26 ಸ್ಥಾನ ಏರಿಕೆ ಕಂಡು 135 ಶ್ರೇಯಾಂಕ ಪಡೆದಿದ್ದಾರೆ.

ಸುಮಿತ್ ನಗಾಲ್ 2017ರಲ್ಲಿ ಬೆಂಗಳೂರು ಚಾಲೆಂಜರ್ ಈವೆಂಟ್ ಗೆದ್ದಿದ್ದರು. ಬ್ಯೂನಸ್ ಐರಿಸ್ ಟೂರ್ನಿಯಲ್ಲಿ ಭಾಗವಹಿಸಿದ್ದ ಆರಂಭದಲ್ಲಿ ಸುಮಿತ್ ನಗಾಲ್ ಅವರು 161 ಸ್ಥಾನ ಪಡೆದುಕೊಂಡಿದ್ದರು. ಆದರೆ, ಸೆಮಿಫೈನಲ್ ಹಣಾಹಣಿಯಲ್ಲಿ 108ನೇ ಶ್ರೇಯಾಂಕದ ಬ್ರೆೆಜಿಲ್‌ನ ಥಿಯಾಗೊ ಮೊಂಟೆರೊ ಅವರ ವಿರುದ್ಧ 6-0, 6-1 ಅಂತರದಲ್ಲಿ ಗೆದ್ದು ಸಂಚಲನ ಮೂಡಿಸಿದ್ದರು.

32ನೇ ಸುತ್ತಿನಲ್ಲಿ 22ರ ಪ್ರಾಯದ ಆಟಗಾರ ಬ್ರೆೆಜಿಲ್‌ನ ಪೆಡ್ರೊ ಸಕಮೊಟೊ ಅವರ ವಿರುದ್ಧ 6-7, 6-4, 6-3 ಅಂತರದಲ್ಲಿ ಗೆದ್ದಿದ್ದರು. ನಂತರ, ಜೋಸ್ ಹೆರ್ನಾಂಡ್ಜ್‌-ಫೆರ್ನಾಂಡ್ಜ್‌ ವಿರುದ್ಧ 6-3, 3-6, 6-4 ಗೆದ್ದಿದ್ದರು. ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಫ್ರಾನ್ಸಿಸ್ಕೋ ವಿರುದ್ಧ 6-3, 4-6, 6-4 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಮಾಡಿದ್ದರು. 

ಯುಎಸ್ ಓಪನ್ ಆಡುವ ಮೂಲಕ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಆಡಿದ್ದ ಸುಮಿತ್ ನಗಾಲ್ ಅವರು ಮೊದಲ ಸುತ್ತಿನಲ್ಲೇ ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ಸೋಲು ಅನುಭವಿಸಿದರೂ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರೊಂದಿಗೆ ಗ್ರ್ಯಾನ್ ಸ್ಕ್ಯಾಮ್ ಆಡಿದ ಭಾರತದ ನಾಲ್ಕನೇ ಟೆನಿಸ್ ಆಟಗಾರ ಎಂಬ ಗೌರವಕ್ಕೆೆ ನಗಾಲ್ ಭಾಜನರಾದರು.

SCROLL FOR NEXT