ವಿಶ್ವ ಅಥ್ಲೆಟಿಕ್ಸ್ ನಿಂದ 500,000 ಡಾಲರ್ ಕೋವಿಡ್-19 ವಿಪತ್ತು ನಿಧಿ, ಕ್ರೀಡಾಪಟುಗಳಿಗೆ ನೆರವಿನ ಹಸ್ತ
ವಿಶ್ವ ಅಥ್ಲೆಟಿಕ್ಸ್ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೌಂಡೇಷನ್ (ಐಎಎಫ್) ಜಂಟಿಯಾಗಿ 500,000 ಡಾಲರ್ ಮೊತ್ತದ ಕೋವಿಡ್-19 ವಿಪತ್ತು ನಿಧಿಯನ್ನು ಸ್ಥಾಪಿಸಿವೆ.
ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೌಂಡೇಷನ್ (ಐಎಎಫ್) ಜಂಟಿಯಾಗಿ 500,000 ಡಾಲರ್ ಮೊತ್ತದ ಕೋವಿಡ್-19 ವಿಪತ್ತು ನಿಧಿಯನ್ನು ಸ್ಥಾಪಿಸಿವೆ.
ಕೋವಿಡ್-19 ರಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಈ ನಿಧಿಯಿಂದ ಕ್ರೀಡಾಪಟುಗಳಿಗೆ ನೆರವು ನೀಡಲಾಗುತ್ತದೆ ಎಂದು ಈ ಎರಡೂ ಸಂಸ್ಥೆಗಳು ತಿಳಿಸಿವೆ.
ಕೊರೋನಾ ವೈರಸ್ ಹರಡುವಿಕೆ ವಿಶ್ವಾದ್ಯಂತ ಕ್ರೀಡಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದ್ದು, ಕ್ರೀಡಾಪಟುಗಳ ಆದಾಯಕ್ಕೆ ಹೊಡೆತ ಬಿದ್ದಿದೆ.
ನೆರವಿಗಾಗಿ ಸಲ್ಲಿಸಲಾಗುವ ಅರ್ಜಿಗಳ ಮೌಲ್ಯಮಾಪನವನ್ನು ವಿಶ್ವ ಅಥ್ಲೆಟಿಕ್ಸ್ ನ ಅಧ್ಯಕ್ಷ ಸೆಬಾಸ್ಟಿಯನ್ ಕೋ ನಡೆಸಲಿದ್ದಾರೆ. ಈ ತಂಡ ಈ ವಾರದಲ್ಲಿ ಮತ್ತೊಮ್ಮೆ ಸಭೆ ಸೇರಲಿದ್ದು, ಹೆಚ್ಚುವರಿ ಹಣವನ್ನು ಸಂಗ್ರಹಿಸುವುದು ಹೇಗೆ ಎಂಬ ಬಗ್ಗೆ ತೀರ್ಮಾನಿಸಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.