ಸುಮಿತ್ ನಗಾಲ್ 
ಕ್ರೀಡೆ

ಯುಎಸ್ ಓಪನ್: ಸುಮಿತ್ ನಗಾಲ್ ಗೆ ನೇರ ಪ್ರವೇಶ

ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರಷರ ಸಿಂಗಲ್ಸ್ ಮುಖ್ಯ ಸುತ್ತಿಗೆ ನೇರ ಅರ್ಹತೆ ಗಳಿಸಿದ್ದಾರೆ. ಟೂರ್ನಿಗೆ ಆಗಸ್ಟ್ 31ರಂದು ಚಾಲನೆ ದೊರೆಯಲಿದೆ.

ನ್ಯೂಯಾರ್ಕ್: ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಗಾಲ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರಷರ ಸಿಂಗಲ್ಸ್ ಮುಖ್ಯ ಸುತ್ತಿಗೆ ನೇರ ಅರ್ಹತೆ ಗಳಿಸಿದ್ದಾರೆ. ಟೂರ್ನಿಗೆ ಆಗಸ್ಟ್ 31ರಂದು ಚಾಲನೆ ದೊರೆಯಲಿದೆ.

ವಿಶ್ವ ಪುರುಷರ ಸಿಂಗಲ್ಸ್ ಕ್ರಮಾಂಕದಲ್ಲಿ 127ನೇ ಸ್ಥಾನದಲ್ಲಿರುವ ನಗಾಲ್, 128 ಮಂದಿಯ ಪಟ್ಟಿಯಲ್ಲಿ ಕೊನೆಯವರಾಗಿ ಪ್ರವೇಶಗಿಟ್ಟಿಸಿದರು. ಇತ್ತೀಚಿನ ಎಟಿಪಿ ಕ್ರಮಾಂಕಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಟೂರ್ನಿಯ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಇದು ನಾಗಲ್ ಅವರ ಎರಡನೇ ಪ್ರದರ್ಶನವಾಗಲಿದೆ. ಕಳೆದ ವರ್ಷ, ಯುಎಸ್ ಓಪನ್ ಪಂದ್ಯಾವಳಿಯಲ್ಲಿ ನಾಗಲ್ ತನ್ನ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರವೇಶ ಪಡೆದಿದ್ದರು.  ತನ್ನ ಎಲ್ಲಾ ಅರ್ಹತಾ ಸುತ್ತಿನ ಪಂದ್ಯಗಳನ್ನು ಗೆದ್ದ ನಂತರ ಅವರು ಪ್ರಥಮ ಪಂದ್ಯದಲ್ಲೇ ಟೆನಿಸ್ ದಂತಕಥೆ  ರೋಜರ್ ಫೆಡರರ್ ಜೊತೆ ಮುಖಾಮುಖಿಯಾಗಿದ್ದರು. 

ಬಹು ನಿರೀಕ್ಷಿತ ಪಂದ್ಯದಲ್ಲಿ  6-4, 1-6, 2-6, 4-6ರಿಂದ ಸೋಲುವ ಮುನ್ನ ಫೆಡರರ್ ವಿರುದ್ಧ ಒಂದು ಸೆಟ್ ಗೆದ್ದಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT