ಕ್ರೀಡೆ

ಭಾರತ ತಂಡದ ಮಾಜಿ ಫುಟ್ಬಾಲಿಗ ಮನಿಟೋಂಬಿ ನಿಧನ

Raghavendra Adiga

ಕೋಲ್ಕೊತಾ: ಭಾರತ ತಂಡದ ಮಾಜಿ ಫುಟ್ಬಾಲ್ ಆಟಗಾರ ಲೈಶ್ರಾಮ್ ಮನಿಟೋಂಬಿ ಸಿಂಗ್ (39) ಭಾನುವಾರ ನಿಧನರಾಗಿದ್ದಾರೆ. 

ಸಿಂಗ್ ಅವರ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ಎಫ್) ಸಂತಾಪ ವ್ಯಕ್ತಪಡಿಸಿದೆ.

2002ರಲ್ಲಿ ವಿಯೆಟ್ನಾಂನ ಹೊ ಚಿ ಮಿನ್ಹ್ ಸಿಟಿಯಲ್ಲಿ ಎಲ್ ಜಿ ಕಪ್ ಎತ್ತಿ ಹಿಡಿದ ಭಾರತ ತಂಡದ ಸದಸ್ಯರಲ್ಲಿ ಮನಿಟೋಂಬಿ ಒಬ್ಬರು. 2002ರ ಆಗಸ್ಟ್ 6ರಂದು ಆತಿಥೇಯ ವಿಯೆಟ್ನಾಂ ವಿರುದ್ಧ ಅಂತಾರಾಷ್ಟ್ರೀಯ ಟೂರ್ನಿಗೆ ಪಾದಾರ್ಪಣೆ ಸಿಂಗ್, ಆ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸುವುದರ ಜತೆಗೆ ಜಮೈಕಾ ವಿರುದ್ಧ ವಾಟ್‌ಫೋರ್ಡ್ ಮತ್ತು ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಎರಡು ಸೌಹಾರ್ದ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು.

SCROLL FOR NEXT