ಕ್ರೀಡೆ

ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸುವುದಕ್ಕೆ ಮೊದಲು ಹೃದಯಾಘಾತದಿಂದ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ ನಿಧನ

Sumana Upadhyaya

ನವದೆಹಲಿ:ಹಿರಿಯ ಅಥ್ಲೆಟಿಕ್ ಕೋಚ್ ಪುರುಷೋತ್ತಮ ರೈ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಇಂದು ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಅವರನ್ನು ಸನ್ಮಾನಿಸುವುದಕ್ಕೆ ಒಂದು ದಿನ ಮೊದಲು ಮೃತಪಟ್ಟಿರುವುದು ಬೇಸರದ ವಿಷಯ.ಜೀವಾವಧಿ ಸಾಧನೆ ವಿಭಾಗದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪುರುಷೋತ್ತಮ ರೈ ದ್ರೋಣಾಚಾರ್ಯ ಪ್ರಶಸ್ತಿ ಪಡೆಯಬೇಕಾಗಿತ್ತು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದ ಪೂರ್ವಭ್ಯಾಸದಲ್ಲಿ ಪುರುಷೋತ್ತಮ ರೈಯವರು ಭಾಗಿಯಾಗಿದ್ದರು, ನಂತರ ಅವರಿಗೆ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪುರುಷೋತ್ತಮ ರೈ ಭಾರತೀಯ ತಂಡಕ್ಕೆ 1987ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ, 1988ರ ಏಷಿಯನ್ ಟ್ರಾಕ್ ಅಂಡ್ ಫೀಲ್ಡ್ ಚಾಂಪಿಯನ್ ಷಿಪ್ ನಲ್ಲಿ ಮತ್ತು 1999ರ ಎಸ್ ಎಎಫ್ ಗೇಮ್ಸ್ ನಲ್ಲಿ ಕೋಚ್ ಆಗಿದ್ದರು.

ಕೋವಿಡ್-19 ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ವರ್ಚುವಲ್ ಮೂಲಕ ನಡೆಯಲಿದೆ.

SCROLL FOR NEXT