ಕ್ರೀಡೆ

ಕ್ರೀಡಾ ಪ್ರಶಸ್ತಿಗಳ ಮೊತ್ತದಲ್ಲಿ ಭಾರೀ ಏರಿಕೆ

Lingaraj Badiger

ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಕ್ರೀಡಾ ದಿನವಾದ ಆಗಸ್ಟ್ 29 ರ ಶನಿವಾರದಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಮೊತ್ತವನ್ನು ಏರಿಕೆ ಮಾಡಿದ್ದಾರೆ.

ಇದರ ಅಡಿಯಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ವಿಜೇತರಿಗೆ 25 ಲಕ್ಷ ರೂ. ಮತ್ತು ಅರ್ಜುನ ಪ್ರಶಸ್ತಿ ವಿಜೇತರಿಗೆ 15 ಲಕ್ಷ ರೂ. ನೀಡಲಾಗುವುದು.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಏಳು ವಿಭಾಗಗಳಲ್ಲಿ ನಾಲ್ಕು ವಿಭಾಗಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.

ಖೇಲ್ ರತ್ನ ವಿಜೇತರಿಗೆ ಏಳುವರೆ ಲಕ್ಷ ರೂಪಾಯಿಗಳ ಬದಲು 25 ಲಕ್ಷ ರೂ., ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ ಐದು ಲಕ್ಷ ರೂಪಾಯಿಗಳ ಬದಲು 15 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.

ಜೀವಮಾನ ಸಾಧನೆಗೆಯಾಗಿ ನೀಡಲಾಗುವ ದ್ರೋಣಚಾರ್ಯ ಪ್ರಶಸ್ತಿ ಮೊತ್ತವನ್ನು 5 ಲಕ್ಷದಿಂದ 15 ಲಕ್ಷ ಹಾಗೂ ದ್ರೋಣಚಾರ್ಯ ಪ್ರಶಸ್ತಿಗೆ ಮೊತ್ತವನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಧ್ಯಾನ್‍ಚಂದ್ ಪ್ರಶಸ್ತಿ ಪುರಸ್ಕøತರಿಗೆ ಕೊಡುತ್ತಿದ್ದ 5 ಲಕ್ಷ ಬದಲಿಗೆ 10 ಲಕ್ಷ ನೀಡಲಾಗುತ್ತಿದೆ.

ಹೊಸ ನಿಯಮ ಪ್ರಸಕ್ತ ವರ್ಷದಿಂದಲೇ ಜಾರಿಯಾಗಲಿದೆ ಎಂದು ಕೇಂದ್ರ ಕ್ರೀಡಾಮಂತ್ರಿ ಕಿರಣ್ ರಿಜಿಜು ತಿಳಿಸಿದ್ದಾರೆ. ಒಟ್ಟು ಏಳು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ಕೊಡಮಾಡುತ್ತಿದ್ದ ಪ್ರಶಸ್ತಿಗಳ ನಗದು ಮೊತ್ತವನ್ನು ಈ ವರ್ಷದಿಂದಲೇ ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

SCROLL FOR NEXT