ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫಾರ್ಮುಲಾ 2ರಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಜೆಹಾನ್ ದಾರುವಾಲಾ

ಭಾರತದ ಪ್ರತಿಭಾನ್ವಿತ ಹಾಗೂ ಯುವ ಚಾಲಕ ಜೆಹಾನ್ ದಾರುವಾಲಾ ಫಾರ್ಮುಲಾ 2 ರೇಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಜೆಹಾನ್
Vishwanath S
Updated On : 7 Dec 2020, 5:00 pm

ಸಾಖಿರ್(ಬಹ್ರೇನ್): ಭಾರತದ ಪ್ರತಿಭಾನ್ವಿತ ಹಾಗೂ ಯುವ ಚಾಲಕ ಜೆಹಾನ್ ದಾರುವಾಲಾ ಫಾರ್ಮುಲಾ 2 ರೇಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಭಾನುವಾರ (ಡಿಸೆಂಬರ್ 7) ಬಹ್ರೇನ್ ನಲ್ಲಿ ನಡೆದ ಸಾಖಿರ್ ಗ್ರ್ಯಾಂಡ್ ಪ್ರಿ ಫಾರ್ಮುಲಾ 2 ರೇಸ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಚಾಲಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಫಾರ್ಮುಲಾ 2 ಚಾಂಪಿಯನ್ ಜರ್ಮನಿಯ ಮಿಕ್ ಶುಮಾಕರ್ ಮತ್ತು ಬ್ರಿಟಿಷ್ ರೇಸರ್ ಡೇನಿಯಲ್ ಟಿಕ್ಟಮ್ ವಿರುದ್ಧದ ರೋಚಕ ಸ್ಪರ್ಧೆಯಲ್ಲಿ 22ರ ಹರೆಯದ ಭಾರತೀಯ ಜೆಹಾನ್ ದಾರುವಾಲಾ ಅವರು ಅಗ್ರ ಸ್ಥಾನಿ ಅಲಂಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

Advertisement

Advertisement

ಫಾರ್ಮುಲಾ 1ರ ಬೆಂಬಲ ಸ್ಪರ್ಧೆಯಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2020ನೇ ವರ್ಷವನ್ನು ಜೆಹಾನ್ ಉತ್ತಮ ರೀತಿಯಲ್ಲಿ ಕೊನೆಗೊಳಿಸಿದ್ದಾರೆ. ಫೋರ್ಸ್ ಇಂಡಿಯಾ ಎಫ್ 1 ತಂಡದ ರಕ್ಷಕರಾಗಿದ್ದ ಜೆಹಾನ್ ಅವರು ಕಾರ್ಲಿನ್ ಮೋಟಾರ್ ಸ್ಪೋರ್ಟ್ಸ್ ಜತೆ ಫಾರ್ಮುಲಾ-2 ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement