ಕ್ರೀಡೆ

2020 ರಲ್ಲಿ ವಿರಾಟ್ ಕೊಹ್ಲಿ, ಗೀತಾ ಫೋಗಟ್ ಟ್ವೀಟರ್ ನಲ್ಲಿ ಪ್ರಭಾವಿ ಕ್ರೀಡಾಪಟುಗಳು

Srinivas Rao BV

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕುಸ್ತಿಪಟು ಗೀತಾ ಫೋಗಟ್ ಈ ವರ್ಷ ಟ್ವಿಟರ್‌ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ತಾಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿರುವ ಕ್ರೀಡಾಪಟುವಾಗಿದ್ದಾರೆ. 

ಈ ವರ್ಷ ವಿಶ್ವಾದ್ಯಂತ ಕೋವಿಡ್-19 ನಿಂದಾಗಿ ಲಾಕ್‌ಡೌನ್ ಕಾರಣದಿಂದಾಗಿ ಕ್ರೀಡಾ ಚಟುವಟಿಕೆಗಳು ದೀರ್ಘಕಾಲದವರೆಗೆ ಸ್ಥಗಿತಗೊಂಡಿವೆ. 

ಈ ಸಮಯದಲ್ಲಿ, ಆಟಗಾರರು ಮತ್ತು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪರಸ್ಪರ ಸಂವಾದ ನಡೆಸಿದ್ದಾರೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಈ ವರ್ಷದ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು, ಅದರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್‌ಗೆ ಧೋನಿ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಪತ್ರ ಬರೆದಿದ್ದಾರೆ.

ಈ ವರ್ಷದ ಭಾರತೀಯ ಕ್ರೀಡಾಕೂಟದಲ್ಲಿ ಟ್ವಿಟರ್‌ನಲ್ಲಿ ಅತಿ ಹೆಚ್ಚು ರಿಟ್ವೀಟ್ ಮಾಡಲಾಗಿರುವ ಪತ್ರಕ್ಕೆ ಧೋನಿ ಪ್ರತಿಕ್ರಿಯಿಸಿದ್ದರು. ವಿರಾಟ್, ಅನುಷ್ಕಾ ಶರ್ಮಾ ಅವರೊಂದಿಗೆ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಮನೆಗೆ ಬರುವ ಹೊಸ ಅತಿಥಿ ಬಗ್ಗೆ ಮಾಹಿತಿ ನೀಡಿದ್ದರು. ಅವರ ಪೋಸ್ಟ್ ಟ್ವಿಟ್ಟರ್ ನಲ್ಲಿ ಹೆಚ್ಚು ಇಷ್ಟವಾಯಿತು. 

ಕ್ರೀಡೆಗಳಲ್ಲಿ ಹೆಚ್ಚಿನ ಹ್ಯಾಶ್‌ಟ್ಯಾಗ್‌ಗಳ ವಿಷಯದಲ್ಲಿ ಐಪಿಎಲ್ 2020 ಪ್ರಥಮ ಸ್ಥಾನದಲ್ಲಿದೆ. ಈ ಬಾರಿ ಕೊರೋನಾದ ಕಾರಣ, ಐಪಿಎಲ್‌ನ 13 ನೇ ಋತುವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಸಲಾಯಿತು. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2020 ರಲ್ಲಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ತಂಡ. ಈ ವರ್ಷ ಟ್ವಿಟರ್‌ನಲ್ಲಿ ಅತಿ ಹೆಚ್ಚು ಟ್ವೀಟ್ ಮಾಡುವ ವಿಷಯದಲ್ಲಿ ವಿಸ್ಲ್ ಪೋಡು ಹ್ಯಾಶ್‌ಟ್ಯಾಗ್ ಎರಡನೇ ಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ಹ್ಯಾಶ್‌ಟ್ಯಾಗ್ ಮೂರನೇ ಸ್ಥಾನದಲ್ಲಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಮಾಜಿಕ ತಾಣದಲ್ಲಿ ಹೆಚ್ಚು ಚರ್ಚಿಸಲ್ಪಟ್ಟ ಆಟಗಾರ.

ಧೋನಿ ಎರಡನೇ ಮತ್ತು ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮಹಿಳಾ ಕುಸ್ತಿಪಟುಗಳಲ್ಲಿ, ಗೀತಾ ಫೋಗಾಟ್ ಟ್ವೀಟರ್‌ನಲ್ಲಿ ಪ್ರಾಬಲ್ಯ ಸಾಧಿಸಿ ಪ್ರಥಮ ಸ್ಥಾನ ಗಳಿಸಿದರೆ, ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು ಮತ್ತು ಸೈನಾ ನೆಹ್ವಾಲ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.

SCROLL FOR NEXT