ಕ್ರೀಡೆ

ವೈಯಕ್ತಿಕ ಕುಸ್ತಿ ವಿಶ್ವಕಪ್‌: ಅನ್ಶುಗೆ ಬೆಳ್ಳಿ

Raghavendra Adiga

ನವದೆಹಲಿ: ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ 2020 ರ ವೈಯಕ್ತಿಕ ಕುಸ್ತಿ ವಿಶ್ವಕಪ್‌ನ ಫೈನಲ್‌ಗೆ ತಲುಪಿದ ಭಾರತದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್, ಪ್ರಶಸ್ತಿ ಪಂದ್ಯದಲ್ಲಿ ಸೋತ ನಂತರ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.

19 ವರ್ಷದ ಭಾರತೀಯ ಕುಸ್ತಿಪಟು ಫೈನಲ್‌ನಲ್ಲಿ ಮೊಲ್ಡೊವಾದ  ಅನಸ್ತಾಸಿಯಾ ನಿಚಿತಾ ವಿರುದ್ಧ 5-1 ಅಂಕಗಳಿಂಡ ಸೋತು ಬೆಳ್ಳಿ ಪದಕ ಗಳಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಅನ್ಶು ಅಜರ್ಬೈಜಾನ್ ಕುಸ್ತಿಪಟು ಅಲೋನಾ ಕೊಲೆನಿಸ್ ಅವರನ್ನು 4-2 ಅಂಕಗಳಿಂದ ಸೋಲಿಸಿದರು. ಕ್ವಾರ್ಟರ್‌ಫೈನಲ್ಸ್ನಲ್ಲಿ, ಅವರು ಜರ್ಮನಿಯ ಕುಸ್ತಿಪಟು ಲಾರಾ ಮೆರ್ಟೆನ್ಸ್‌ರನ್ನು 3–1 ಪಾಯಿಂಟ್‌ಗಳಿಂದ ಸೋಲಿಸಿ ಸೆಮಿಫೈನಲ್ಸ್ ತಲುಪಿದರು.

ಅನ್ಶು ಅವರು ಸ್ಪರ್ಧಿಸಿರುವ ಮೂರು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರತಿಯೊಂದರಲ್ಲಿಯೂ ಪದಕ ಗಳಿಸಿಕೊಂಡಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆಯಾದ ಈಕೆ ಭಾರತದ ಅತ್ಯಂತ ಭರವಸೆಯ ಯುವ ಕುಸ್ತಿಪಟುಗಳಲ್ಲಿ ಒಬ್ಬರೆಂಬ ಖ್ಯಾತಿಯನ್ನು ಗಳಿಸಿದ್ದಾರೆ ಮತ್ತು ಈ ಪಂದ್ಯಾವಳಿಯಲ್ಲಿ ಈ ಮೊದಲು ಮೂರು ಅದ್ಭುತ ಗೆಲುವುಗಳ ನಂತರ ಫೈನಲ್‌ಗೆ ಗೆ ಪ್ರವೇಶಿಸಿದ್ದರು.

57 ಕೆಜಿ ಒಲಿಂಪಿಕ್ ವಿಭಾಗವಾಗಿದ್ದು, ಭಾರತವು ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನೂ ಕೋಟಾವನ್ನು ಗಳಿಸಿಕೊಂಡಿಲ್ಲ. 

SCROLL FOR NEXT