ಅಮಿತ್ ಪಂಗಲ್ 
ಕ್ರೀಡೆ

ಬಾಕ್ಸಿಂಗ್ ವಿಶ್ವಕಪ್‌: ಅಮಿತ್ ಪಂಗಲ್ ಫೈನಲ್ ಗೆ

ಜರ್ಮನಿಯ ಕಲೋನ್‌ನಲ್ಲಿ ನಡೆಯುತ್ತಿರುವ 52 ಕೆಜಿ ವಿಭಾಗದ ಬಾಕ್ಸಿಂಗ್ ವಿಶ್ವಕಪ್‌ನ ಸೆಮಿಫೈನಲ್ಸ್ ನಲ್ಲಿ ಫ್ರಾನ್ಸ್‌ನ ಬಿಲಾಲ್ ಬೆನಾಮಾ ಅವರನ್ನು ಸೋಲಿಸಿ ಅಮಿತ್ ಪಂಗಲ್ ಫೈನಲ್‌ಗೆ ಪ್ರವೇಶಿಸಿದರು.

ನವದೆಹಲಿ: ಜರ್ಮನಿಯ ಕಲೋನ್‌ನಲ್ಲಿ ನಡೆಯುತ್ತಿರುವ 52 ಕೆಜಿ ವಿಭಾಗದ ಬಾಕ್ಸಿಂಗ್ ವಿಶ್ವಕಪ್‌ನ ಸೆಮಿಫೈನಲ್ಸ್ ನಲ್ಲಿ ಫ್ರಾನ್ಸ್‌ನ ಬಿಲಾಲ್ ಬೆನಾಮಾ ಅವರನ್ನು ಸೋಲಿಸಿ ಅಮಿತ್ ಪಂಗಲ್ ಫೈನಲ್‌ಗೆ ಪ್ರವೇಶಿಸಿದರು.

ವಿಶ್ವ ಚಾಂಪಿಯನ್‌ಶಿಪ್ 2019 ರ ಕಂಚಿನ ಪದಕ ವಿಜೇತ ಬೆನಾಮಾ ವಿರುದ್ಧದ ಏಕಪಕ್ಷೀಯ ಪಂದ್ಯದಲ್ಲಿ ಫ್ಲೈ ವೇಟ್‌ನಲ್ಲಿ ವಿಶ್ವದ ಅಗ್ರ ಆಟಗಾರ ಪಂಗಲ್ 5–0ರಿಂದ ಜಯಗಳಿಸಿದರು. 52 ಕೆಜಿ ವಿಭಾಗದಲ್ಲಿ ಕೇವಲ ಮೂವರು ಬಾಕ್ಸರ್ ಗಳು ಸ್ಪರ್ಧಿಸಿದ್ದಾರೆ. 

ಪಂಗಲ್ ಚಿನ್ನದ ಪದಕಕ್ಕಾಗಿ ಜರ್ಮನಿಯ ಬಾಕ್ಸರ್ ಅರ್ಗಿಶ್ತಿ ಟೆರ್ಟರೇಯನ್ ಅವರನ್ನು ಎದುರಿಸಲಿದ್ದಾರೆ.

ಜರ್ಮನಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತೀಯ ಬಾಕ್ಸರ್ ಗಳು ಐದು ಪದಕಗಳನ್ನು ಖಾತರಿಪಡಿಸಿದ್ದಾರೆ.

ಈ ಪಂದ್ಯಾವಳಿಯಲ್ಲಿ ಪಂಗಲ್, ಪೂಜಾ ರಾಣಿ (ಮಹಿಳೆಯರ 75 ಕೆಜಿ ವಿಭಾಗ), ಮನೀಶಾ ಮತ್ತು ಸಾಕ್ಷಿ (ಮಹಿಳೆಯರ 57 ಕೆಜಿ) ಮತ್ತು ಸಿಮ್ರಾಂಜಿತ್ ಕೌರ್ (ಮಹಿಳೆಯರ 60 ಕೆಜಿ)  ಪದಕ ಗಳಿಸುವುದು ಖಚಿತವಾಗಿದೆ ಎನ್ನಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?