ಅಮಿತ್ ಪಂಗಲ್ 
ಕ್ರೀಡೆ

ಬಾಕ್ಸಿಂಗ್ ವಿಶ್ವಕಪ್: ಅಮಿತ್ ಪಂಗಲ್ ಗೆ ಚಿನ್ನ, ಸತೀಶ್ ಕುಮಾರ್ ಗೆ ಬೆಳ್ಳಿ ಪದಕ

ಟೋಕಿಯೊ ಒಲಿಂಪಿಕ್ಸ್‌ ಗೆ ಆಯ್ಕೆಯಾಗಿರುವ ಭಾರತದ ಬಾಕ್ಸರ್ ಅಮಿತ್ ಪಂಗಲ್ (52 ಕೆಜಿ) ಅವರು ಶನಿವಾರ ಕಲೋನ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 

ಕಲೋನ್: ಟೋಕಿಯೊ ಒಲಿಂಪಿಕ್ಸ್‌ ಗೆ ಆಯ್ಕೆಯಾಗಿರುವ ಭಾರತದ ಬಾಕ್ಸರ್ ಅಮಿತ್ ಪಂಗಲ್ (52 ಕೆಜಿ) ಅವರು ಶನಿವಾರ ಕಲೋನ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಜರ್ಮನಿಯ  ಬಾಕ್ಸರ್ ಅರ್ಗಿಶ್ತಿ ಟೆರ್ಟರೇಯನ್ ಗಾಯಗೊಂಡು ಸ್ಪರ್ಧೆಯಿಂಡ ಹಿಂದೆ ಸರಿದ ನಂತರ ಪಂಗಲ್ ಚಿನ್ನದ ಪದಕ ಗಳಿಸಿದ್ದಾರೆ. ಇನ್ನೊಂದೆಡೆ ಸತೀಶ್ ಕುಮಾರ್ ( 91 ಕೆಜಿ) ತಮ್ಮ ಗಾಯದ ಸಮಸ್ಯೆಯಿಂದ ಅಂತಿಮ ಪಂದ್ಯದಿಂದ ಹಿಂದೆ ಸರಿದ ನಂತರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕಳೆದ ಬಾರಿ ಬೆಳ್ಳಿ ಪದಕ ಗಳಿಸಿದ್ದ ಪಂಗಲ್ ಈ ಮೂಲಕ ನಿರಾಯಾಸವಾಗಿ ಚಿನ್ನದ ಪದ ತಮ್ಮದಾಗಿಸಿಕೊಂಡಿದ್ದಾರೆ.

ಏತನ್ಮಧ್ಯೆ, ಶನಿವಾರ ತಡರಾತ್ರಿ ನಡೆದ ಮಹಿಳೆಯರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ಮನೀಷಾ ಮತ್ತು ಸಾಕ್ಷಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಪೂಜಾ ರಾಣಿ ನೆದರ್ಲೆಂಡ್ಸ್‌ನ ನೌಚ್ಕಾ ಫಾಂಟಿಜ್ನ್ ಅವರ ಕೈಯಲ್ಲಿ ಸೋಲನ್ನು ಅನುಭವಿಸಿ ಕಂಚಿನ ಪದಕ ಗಳಿಸಿಕೊಂಡರು. 

ಗೌರವ್ ಸೋಲಂಕಿ ಮತ್ತು ಮೊಹಮ್ಮದ್ ಹುಸಾಮುದ್ದೀನ್ ಕೂಡ ಪುರುಷರ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕಗಳೊಂದಿಗೆ ತಮ್ಮ ಪ್ರಯಾಣ ಕೊನೆಗೊಳಿಸಿದರು.

ಈ ಮುನ್ನ ಅಮಿತ್ ಪಂಗಲ್ ಗುರುವಾರದ ಪಂದ್ಯದಲ್ಲಿ 2019 ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಫ್ರಾನ್ಸ್‌ನ ಬಿಲಾಲ್ ಬೆನಾಮಾ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT