ಕ್ರೀಡೆ

ಬಾಕ್ಸಿಂಗ್ ವಿಶ್ವಕಪ್: ಭಾರತಕ್ಕೆ 3 ಚಿನ್ನ ಸೇರಿದಂತೆ ಒಂಬತ್ತು ಪದಕ

Raghavendra Adiga

ನವದೆಹಲಿ: ಜರ್ಮನಿಯ ಕಲೋನ್‌ನಲ್ಲಿ ನಿನ್ನೆ ಕೊನೆಗೊಂಡ ಕಲೋನ್ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ಭಾರತ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಅಮಿತ್ ಪಂಗಲ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಮನೀಶಾ ಮೌನ್ ಮತ್ತು ಸಿಮ್ರಾಂಜಿತ್ ಕೌರ್ ಬಂಗಾರದ ಪದಕ ಸಾಧನೆ ಮಾಡಿದ್ದಾರೆ.

ಮಹಿಳಾ ವಿಭಾಗದಲ್ಲಿ, ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಸಿಮ್ರಾಂಜಿತ್ ಕೌರ್ ಫೈನಲ್‌ನಲ್ಲಿ ಜರ್ಮನಿಯವರೇ ಆದ ಎದುರಾಳಿ ಮಾಯಾ ಕ್ಲೀನ್ಹಾನ್ಸ್ ಅವರನ್ನು ಮಣಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. 57 ಕೆಜಿ ವಿಭಾಗದ ಫೈನಲ್‌ನಲ್ಲಿ ಮನೀಷಾ ಮೌನ್ ಎರಡು ಬಾರಿ ಎಐಬಿಎ ಮಹಿಳಾ ಯುವ ವಿಶ್ವ ಚಾಂಪಿಯನ್ ಸಾಕ್ಷಿ ಚೌಧರಿ ಅವರನ್ನು 3: 2 ಅಂಕಗಳಿಂಡ ಪರಾಜಿತಗೊಳಿಸಿದರು. ಸಾಕ್ಷಿ ತನ್ನ ಅಭಿಯಾನವನ್ನು ಬೆಳ್ಳಿಯೊಂದಿಗೆ ಕೊನೆಗೊಳಿದ್ದಾರೆ.

ಇದಕ್ಕೆ ಮುನ್ನ 2018 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು 2019 ಎಎಸ್ಬಿಸಿ ಏಷ್ಯನ್ ಚಾಂಪಿಯನ್ ಅಮಿತ್ ಪಂಗಲ್ 52 ಕೆಜಿ ವಿಭಾಗದಲ್ಲಿ ಬಂಗಾರ ಗೆದ್ದರೆ 91 ಕೆಜಿ ವಿಭಾಗದಲ್ಲಿ ತೀಶ್ ಕುಮಾರ್ ಅವರು ರಜತ ಪದಕ ಗಳಿಸಿದ್ದರು.

ಇದಲ್ಲದೆ ಸೋನಿಯಾ ಲೆದರ್ (57 ಕೆಜಿ), ಪೂಜಾ ರಾಣಿ (75 ಕೆಜಿ) ಗೌರವ್ ಸೋಲಂಕಿ (57 ಕೆಜಿ) ಮತ್ತು ಮೊಹಮ್ಮದ್ ಹುಸಾಮುದಿನ್ (57 ಕೆಜಿ) ಆಯಾ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

SCROLL FOR NEXT