ಕ್ರೀಡೆ

ಏಷ್ಯನ್ ಕುಸ್ತಿ: ಸುನೀಲ್ ಗೆ ಬಂಗಾರ, ಕನ್ನಡಿಗ ಅರ್ಜುನ್ ಗೆ ಕಂಚಿನ ಹಾರ

Raghavendra Adiga

ನವದೆಹಲಿ: ಗ್ರೀಕೋ ರೋಮನ್ 87 ಕೆಜಿ ವಿಭಾಗದಲ್ಲಿ ಭಾರತದ ಸುನೀಲ್ ಕುಮಾರ್ ಫೈನಲ್ ಪಂದ್ಯ ಗೆದ್ದ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 27 ವರ್ಷಗಳ ಬಳಿಕ ಭಾರತ ಗ್ರೀಕೋ ರೋಮನ್ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದೆ.

ಇದಕ್ಕೂ ಮೊದಲು ಗ್ರೀಕೋ-ರೋಮನ್‌ನಲ್ಲಿ ಭಾರತದ ಕೊನೆಯ ಚಿನ್ನ 1993 ರಲ್ಲಿ ಪಪ್ಪು ಯಾದವ್ ಗೆದ್ದರು. ಸ್ಪರ್ಧೆಯ ಮೊದಲ ದಿನ ಭಾರತ ಎರಡು ಯಶಸ್ಸನ್ನು ಕಂಡಿತು. ಸುನಿಲ್ 87 ಕೆಜಿಯಲ್ಲಿ ಚಿನ್ನ ಗೆದ್ದರೆ, ಅರ್ಜುನ್ ಕುಲಕರ್ಣಿ 55 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

2019ರ ಕೂಟದಲ್ಲಿ ಬೆಳ್ಳಿಗೆ ತೃಪ್ತಿಪಟ್ಟಿದ್ದ ಸುನಿಲ್‌, ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಜ್ಮತ್‌ ಕುಸ್ತುಬಯೇವ್‌ ವಿರುದ್ಧ ಗೆದ್ದ್ದು ಫೈನಲ್ಸ್ ತಲುಪಿದ್ದರು.

ಕನ್ನಡಿಗ ಅರ್ಜುನ್ ಗೆ ಕಂಚು

ದಾವಣಗೆರೆ ಮೂಲದ ಅರ್ಜುನ್ ಕುಲಕರ್ಣಿ ಏಷ್ಯನ್ ಕುಸ್ತಿಯ ಗ್ರೀಕೋ ರೋಮನ್‌ ವಿಭಾಗದ 55 ಕೆ.ಜಿ ಸ್ಪರ್ಧೆಯಲ್ಲಿ. ಕಂಚಿನ ಪದಕ ಗಳಿಸಿಕೊಂಡಿದ್ದಾರೆ. ಹಿರಿಯರ ವಿಭಾಗದಲ್ಲಿ ಅರ್ಜುನ್ ಪಾಲಿಗಿದು ಮೊದಲ ಅಂತರಾಷ್ಟ್ರೀಯ ಪದಕವಾಗಿದೆ.

ಸೆಮೀಸ್ ನಲ್ಲಿ ಇರಾನಿನ ನಾಸೆರ್‌ಪೊರ್‌ ವಿರುದ್ಧ 7-1 ಅಂತರದ ಮುನ್ನಡೆ ಪಡೆಇದ್ದ ಅರ್ಜುನ್ ಅಂತ್ಯದ ವೇಳೆಗೆ 7-8ರ ಅಂತರದಲ್ಲಿ ಪರಾಜಿತರಾದರು.ಕಂಚಿಗಾಗಿ ನಡೆದ ಹೋರಾಟದಲ್ಲಿ ಅರ್ಜುನ್ ಕೊರಿಯಾದ ಡೊಂಗ್‌ಹೆಯೊಕ್‌ ವಿರುದ್ಧ 7-4ರಲ್ಲಿ ಜಯ ಸಾಧಿಸಿದ್ದರು.

SCROLL FOR NEXT