ಕ್ರೀಡೆ

ಕೊರೋನಾ ವೈರಸ್ ಎಫೆಕ್ಟ್: ಸೈಪ್ರಸ್ ಶೂಟಿಂಗ್‌ ವಿಶ್ವಕಪ್‌ ನಿಂದ ಹಿಂದೆ ಸರಿದ ಭಾರತ

Lingaraj Badiger

ನವದೆಹಲಿ: ಕೊರೋನಾ ವೈರಸ್ ಪರಿಣಾಮದಿಂದಾಗಿ ಮಾರ್ಚ್ 4 ರಿಂದ 13ರ ವರೆಗೆ ಸೈಪ್ರಸ್ ನಲ್ಲಿ ನಡೆಯುವ ಶೂಟಿಂಗ್‌ ವಿಶ್ವಕಪ್‌ ನಿಂದ ಹಿಂದೆ ಸರಿಯಲು ಭಾರತ ನಿರ್ಧರಿಸಿದೆ.

ಸರ್ಕಾರದ ಸಲಹೆಯಂತೆ ಅಂತರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ(ಐಎಸ್ಎಸ್ಎಫ್) ಆಯೋಜಿಸಿದ್ದ ಶೂಟಿಂಗ್ ವಿಶ್ವಕಪ್ ನಿಂದ ಭಾರತ ತಂಡವನ್ನು ಹಿಂಪಡೆಯಲಾಗಿದೆ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆಯ ಮೂಲಗಳು ಪಿಟಿಐಗೆ ತಿಳಿಸಿವೆ.

ಶೂಟಿಂಗ್ ವಿಶ್ವಕಪ್ ನಿಂದ ನಾವು ಹಿಂದೆ ಸರಿಯಲು ಕೊರೋನಾ ವೈರಸ್ ಭೀತಿಯೇ ಕಾರಣ. ಕೇಂದ್ರ ಸರ್ಕಾರದ ಸಲಹೆಯಂತೆ ತಂಡವನ್ನು ಹಿಂಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಕೂಟದಿಂದ ಬಹ್ರೈನ್‌, ಇರಾನ್‌, ಚೀನಾ, ತೈವಾನ್‌, ಹಾಂಕಾಂಗ್‌, ಮಕಾವು, ಉತ್ತರ ಕೊರಿಯ, ತುರ್ಕ್‌ಮೆನಿಸ್ಥಾನ ಹಿಂದೆ ಸರಿದಿವೆ. ಇದೀಗ ಭಾರತ ಸಹ ಶೂಟಿಂಗ್ ವಿಶ್ವಕಪ್ ನಿಂದ ಹಿಂದೆ ಸರಿದಿದೆ.

ಸೈಪ್ರಸ್ ನಲ್ಲಿ ಇದುವರೆಗೂ ಯಾವುದೇ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರತ ಈ ನಿರ್ಧಾರ ಕೈಗೊಂಡಿದೆ.

SCROLL FOR NEXT