ಕ್ರೀಡೆ

ಹೊಬರ್ಟ್ ಇಂಟರ್ ನ್ಯಾಷನಲ್: ಫೈನಲ್ ತಲುಪಿದ  ಸಾನಿಯಾ ಮಿರ್ಜಾ

Raghavendra Adiga

ಹೊಬರ್ಟ್: ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಇಲ್ಲಿ ನಡೆಯುತ್ತಿರುವ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪೈನಲ್ ತಲುಪಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಡಬಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಸಾನಿಯಾ ಹಾಗೂ ನದಿಯಾ ಜೋಡಿಯು 7-6, 6-2 ಅಂತರದಲ್ಲಿ ನೇರ ಸೆಟ್ ಗಳಲ್ಲಿ ಮರಿಯಾ ಬೌಸ್ಕೊವಾ ಹಾಗೂ ತಮರಾ ಝಿಡಾನ್ಸೆಕ್ ಜೋಡಿಯ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. 

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಾನು ತಾಯಿಯಾದ ಬಳಿಕ ಸುಮಾರು ಎರಡು ವರ್ಷಕ್ಕೂ ಅಧಿಕ ಸಮಯದ ವಿರಾಮದ ನಂತರ ಮತ್ತೆ ಟೆನಿಸ್ ಅಂಗಣಕ್ಕೆ ಮರಳಿದ್ದಾರೆ.ಸಾನಿಯಾ  ವೃತ್ತಿಜೀವನದಲ್ಲಿ ಡಬ್ಲ್ಯುಟಿಎ ಡಬಲ್ಸ್ ಶ್ರೇಯಾಂಕದಲ್ಲಿ 91 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದರು.2017 ರ ಚೀನಾ ಓಪನ್‌ನಲ್ಲಿ ಸೆಮಿಫೈನಲ್ನಂತರ ಡಬ್ಲ್ಯುಟಿಎ ಟೂರ್ನಿಯಿಂದ ದೂರವಿದ್ದ ಇವರು ಇದೀಗ ಮತ್ತೆ ಕ್ರೀಡಾಲೋಕಕ್ಕೆ ಮರಳಿದ್ದಾರೆ.

 ಒಂದು ಗಂಟೆ 24 ನಿಮಿಷಗಳ ಪಂದ್ಯದಲ್ಲಿ ಸಾನಿಯಾ ಜೋಡಿ ಎದುರಾಳಿ ಜೋಡಿಯನ್ನು ಪರಾಜಿತಗೊಳಿಸಿದೆ.ಗೆಲುವಿನ ಕುರಿತು ಉತ್ಸಾಹಿತರಾಗಿರುವ ಸಾನಿಯಾ ಸಾಮಾಜಿಕ ತಾಣದಲ್ಲಿ ತನ್ನ ಮಗನೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಸುದೀರ್ಘ ವಿರಾಮದ ನಂತರ ಮೊದಲ ಪಂದ್ಯ ಗೆದ್ದಿದ್ದ ಸಾನಿಯಾ "ಇಂದು ನನ್ನ ಜೀವನದ ಅತ್ಯಂತ ವಿಶೇಷ ದಿನಗಳಲ್ಲಿ ಒಂದಾಗಿದೆ. ಇಷ್ಟು ದಿನಗಳ ನಂತರ ನನ್ನ ಮೊದಲ ಪಂದ್ಯದಲ್ಲಿ ನನ್ನ ಹೆತ್ತವರು ಮತ್ತು ನನ್ನ ಪುಟ್ಟ ಮಗುವಿನ ಬೆಂಬಲದಿಂದ ನಾನು ಮೊದಲ ಸುತ್ತಿನಲ್ಲಿ ಗೆದ್ದಿರುವೆ" ಎಂದು ಬರೆದು ಟ್ವೀಟ್ ಮಾಡಿದ್ದರು

ಇನ್ನು ಫೈನಲ್‌ನಲ್ಲಿ ಮಿರ್ಜಾ ಮತ್ತು ಕಿಚ್ನಾಕ್ ಅವರು ಚೀನಾದ ಆಲ್-ಚೀನಾ ತಂಡ ಪೆಂಗ್ ಶೂಯಿ ಮತ್ತು ಜಾಂಗ್ ಶುವಾಯ್ ಅವರನ್ನು ಎದುರಿಸಲಿದ್ದಾರೆ

SCROLL FOR NEXT