ಕ್ರೀಡೆ

ಮೆಂಟನ್ ಕಪ್ ಶೂಟಿಂಗ್: ಅಪೂರ್ವಿ, ದಿವ್ಯಾಂಶ್ ಗೆ ಚಿನ್ನ

Raghavendra Adiga

ಇನ್‌ಸ್‌‌ಬರ್ಕ್: ಆಸ್ಟ್ರೀಯಾದಲ್ಲಿ ನಡೆಯುತ್ತಿರುವ ಮೆಂಟನ್ ಕಪ್ ಇಂಟರ್‌ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಪೂರ್ವಿ ಚಂದೇಲಾ ಹಾಗೂ ದಿವ್ಯಾಂಶ್  ಸಿಂಗ್ ಪನ್ವಾರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ 10ಮೀ. ಏರ್ ರೈಫಲ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅಪೂರ್ವಿ ಚಂದೇಲಾ ಅವರು 251.4 ಪಾಯಂಟ್‌ಗಳೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡರು. ಇದೆ ಸ್ಪರ್ಧೆಯಲ್ಲಿ ಅಂಜುಮ್ ಮೌದ್ಗಿಲ್ 229 ಅಂಕಗಳೊಂದಿಗೆ ಕಂಚಿನ ಪದಕಕ್ಕೆೆ ತೃಪ್ತಿಪಟ್ಟುಕೊಂಡರು.

ಪುರುಷರ 10ಮೀ. ಏರ್ ರೈಫಲ್ ವಿಭಾಗದ ಫೈನಲ್ ಸುತ್ತಿನಲ್ಲಿ ದಿವ್ಯಾಂಶ್  249.7 ಪಾಯಿಂಟ್‌ಗಳನ್ನು ಕಲೆ ಹಾಕುವ ಮೂಲಕ  ಚಿನ್ನದ ಪದಕ ಗೆದ್ದರು. ದೀಪಕ್ ಕುಮಾರ್ (228) ಅವರು ಕಂಚಿನ ಪದಕಕ್ಕೆೆ ತೃಪ್ತರಾದರು.

ಇಲ್ಲಿ ಪದಕ ಗೆದ್ದ ಎಲ್ಲ ನಾಲ್ವರು ಶೂಟರ್ ಗಳು ಟೋಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ದಕ್ಷಿಣ ಕೋರಿಯಾದಲ್ಲಿ 2018ರಲ್ಲಿ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಅಂಜುಮ್ ಹಾಗೂ ಮೌದ್ಗಿಲ್ ಅವರು ಕ್ರಮವಾಗಿ ಬೆಳ್ಳಿ ಹಾಗೂ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್‌‌ಗೆ ಅರ್ಹತೆ ಪಡೆದುಕೊಂಡಿದ್ದರು.

2019ರಲ್ಲಿ ಬೀಜಿಂಗ್ ನಲ್ಲಿ ನಡೆದಿದ್ದ  ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ ದಿವ್ಯಾಾಂಶ್ ಬೆಳ್ಳಿ ಪದಕ ಪಡೆಯುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ದೀಪಕ್ ಅವರು ಇದೇ ಸ್ಪರ್ಧೆಯಲ್ಲಿ 14ನೇ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಕಂಚು ಗೆದ್ದು ಅರ್ಹತೆ ಪಡೆದುಕೊಂಡಿದ್ದರು.

SCROLL FOR NEXT