ಕ್ರೀಡೆ

ದೇಶದ ಮೊಟ್ಟ ಮೊದಲ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಚಾಲನೆ

Srinivas Rao BV

ಬೆಂಗಳೂರು: ಪೀಪಲ್ ಟ್ರೀ ನಿರ್ವಹಣೆಯ ದೇಶದ ಮೊಟ್ಟ ಮೊದಲ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಾ. ಸಿ ಅಶ್ವತ್ಥ್‌ ನಾರಾಯಣ ಚಾಲನೆ ನೀಡಿದ್ದಾರೆ.

ಕ್ರೀಡೆಗಳಲ್ಲಿ ಗಾಯಕ್ಕೆ ತುತ್ತಾಗುವ ಕ್ರೀಡಾಪಟುಗಳಿಗೆ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪೀಪಲ್ ಟ್ರಿ ಆಸ್ಪತ್ರೆ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ರೂಪಿಸಲಾಗಿದೆ. 

ದೇಶದ ಮೊದಲ ಕ್ರೀಡಾ ವಿಜ್ಞಾನ ಕೇಂದ್ರ ಇದಾಗಿದೆ. ಕೇಂದ್ರ ಕ್ರೀಡಾ ವಿಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಸಿ ಅಶ್ವತ್ಥನಾರಯಣ,‘‘ವೈದ್ಯಕೀಯ ಚಿಕಿತ್ಸೆ ಮತ್ತು ಕ್ರೀಡೆ ಎರಡನ್ನು ಸಮ್ಮಿಲನಗೊಳಿಸುವುದು ಒಬ್ಬ ವೈದ್ಯ ಹಾಗೂ ಕ್ರೀಡಾಪಟುವಾಗಿ ಎಷ್ಟು ಮಹತ್ವದ ಸಂಗತಿ ಎಂಬುದನ್ನುನಾನು ಬಲ್ಲೆ. ಜಾಗತಿಕ ಮಟ್ಟದಲ್ಲಿ ಕ್ರೀಡಾ ಪಟುಗಳ ಪ್ರತಿ ಹೆಜ್ಜೆಗಳನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಲೇ ಇದ್ದಾರೆ ಎಂದರು.

SCROLL FOR NEXT