ಕ್ರೀಡೆ

ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾಮನ್ವೆಲ್ತ್ ಪದಕ ವಿಜೇತ ಪರ್ದೀಪ್ ಸಿಂಗ್

Raghavendra Adiga

2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ರಾಷ್ಟ್ರೀಯ ಚಾಂಪಿಯನ್ ವೇಟ್‌ಲಿಫ್ಟರ್ ಪರ್ದೀಪ್ ಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ದೇಶೀ ಕ್ರೀಡಾಕೂಟದಲ್ಲಿ ರೈಲ್ವೆಯನ್ನು ಪ್ರತಿನಿಧಿಸುವ ಪರ್ದೀಪ್ ಸಿಂಗ್ ಅವರ ರಕ್ತದ ಮಾದರಿಯು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇದೀಗ ಅವರನ್ನು ತಾತ್ಕಾಲಿಕವಾಗಿ ನಾಲ್ಕು ವರ್ಷಗಳ ಅಮಾನತು ಶಿಕ್ಷೆಗೆ ಗುರಿಮಾಡಲಾಗಿದೆ.

ಪರ್ದೀಪ್ ಸಿಂಗ್ ಅವರ ರಕ್ರದ ಮಾದರಿಯನ್ನು ಎಚ್‌ಜಿಹೆಚ್ ಗೆ ಒಳಪಡಿಸಿದ ವೇಳೆ ಅವರು ತಪ್ಪಿತಸ್ಥರೆಂದು ಗೊತ್ತಾಗಿದೆ.

ರಾಷ್ಟ್ರೀಯ ಆಂಟಿ-ಡೋಪಿಂಗ್ ಏಜೆನ್ಸಿ (ನಾಡಾ) ಮಹಾನಿರ್ದೇಶಕ ನವೀನ್ ಅಗರ್ವಾಲ್ ಅವರ ಪ್ರಕಾರ, ಭಾರತೀಯ ಕ್ರೀಡಾಪಟು ಎಚ್‌ಜಿಎಚ್‌ಗೆ ಧನಾತ್ಮಕ ವರದಿ ಪಡೆದ ಭಾರತದ ಮೊದಲ ಕ್ರೀಡಾಪಟು ಪರ್ದೀಪ್ ಸಿಂಗ್ ಆಗಿದ್ದಾರೆ. 

ಈ ವರ್ಷ ಮಾರ್ಚ್ ತಿಂಗಳಲ್ಲಿ ಡೋಪಿಂಗ್ ಪರೀಕ್ಷೆ ನಡೆದಿದ್ದು ಕೋವಿಡ್  ಸಾಂಕ್ರಾಮಿಕ ಪ್ರೇರಿತ ಲಾಕ್ ಡೌನ್ ಕಾರಣದಿಂದ ವರದಿಯನ್ನು ಈಗ ಬಹಿರಂಗಪಡಿಸಲಾಗಿದೆ. "ನಾಡಾ ಪರೀಕ್ಷೆಯನ್ನು ಪ್ರಾರಂಭಿಸಿದ ಸಮಯದಿಂದ ರಕ್ತದ ಮಾದರಿಯಲ್ಲಿ ಹ್ಯೂಮನ್ ಗ್ರೋತ್ ಹಾರ್ಮೋನ್- ಎಚ್‌ಜಿಎಚ್‌ಪತ್ತೆಹಚ್ಚಿದ ಮೊದಲ ಉದಾಹರಣೆಯಾಗಿದೆ" ಎಂದು ಅಗರ್ವಾಲ್ ಹೇಳಿದರು. "ನಾವು ಲಾಕ್ ಡೌನ್ ಗೆ ಸ್ವಲ್ಪ ಮೊದಲು ಮಾರ್ಚ್ ನಲ್ಲಿ ಸಂಬಂಧಪಟ್ಟ ಫೆಡರೇಶನ್ ಮತ್ತು ವೇಟ್ ಲಿಫ್ಟರ್ ಗೆ ಹೇಳಿದ್ದೆವು. ಬಿ ಸ್ಯಾಂಪಲ್ ಸಮಸ್ಯೆಯಿಂದಾಗಿ, ಅದನ್ನು ಸಾರ್ವಜನಿಕವಾಗಿ ತಕ್ಷಣವೇ ಬಹಿರಂಗಪಡಿಸಲು ನಮಗೆ ಸಾಧ್ಯವಾಗಲಿಲ್ಲ. ”

ಎಚ್‌ಜಿಹೆಚ್, ಕ್ರೀಡೆಗಳಲ್ಲಿ ಮಾನವನ ಉತ್ತಮ ಪ್ರದರ್ಶನಕ್ಕೆ ಅಗತ್ಯವಾದ ಹಾರ್ಮೋನ್ ಅನ್ನು ವೃದ್ದಿಸುತ್ತದೆ.ಕಳೆದ ಡಿಸೆಂಬರ್‌ನಲ್ಲಿ ಪಟಿಯಾಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನಲ್ಲಿ ನಡೆದ ಶಿಬಿರದ ಸಂದರ್ಭದಲ್ಲಿ ಸ್ಪರ್ಧೆಯ ಹೊರಗಿನ ಪರೀಕ್ಷೆಯಲ್ಲಿ ಸಿಂಗ್ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.  ಮತ್ತು ಮಾದರಿಯನ್ನು ದೋಹಾದ ವಾಡಾ-ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಈ ಮಧ್ಯೆ, ಫೆಬ್ರವರಿಯಲ್ಲಿ, ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 102 ಕೆಜಿ ವಿಭಾಗದಲ್ಲಿ ಸಿಂಗ್ ಚಿನ್ನದ ಪದಕ ಗೆದ್ದರು, 

ಸಿಂಗ್ ಅವರಲ್ಲದೆ, ಈ ವರ್ಷದ ಖೆಲೋ ಇಂಡಿಯಾ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಬ್ಬರು ಕ್ರೀಡಾಪಟುಗಳು  ಸಹ ಡೋಪಿಂಗ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರಲ್ಲಿ ಓರ್ವ ವೇಟ್‌ಲಿಫ್ಟರ್  ಆಗಿದ್ದರೆ ಇನ್ನೊಬ್ಬರು ಬಾಕ್ಸರ್ ಆಗಿದ್ದಾರೆ. 
 

SCROLL FOR NEXT