ಕ್ರೀಡೆ

ಕೊರೋನಾ ವಿರುದ್ಧ ಹೋರಾಟಕ್ಕೆ ತನ್ನ ಆರು ತಿಂಗಳ ಸಂಬಳ ನೀಡಿದ ಭಜರಂಗ್ ಪುನಿಯಾ

Raghavendra Adiga

ಭಾರತದ ಖ್ಯಾತ ಕುಸ್ತಿಪಟು ಭಜರಂಗ್ ಪುನಿಯಾ ಸೋಮವಾರ ತನ್ನ ಆರು ತಿಂಗಳ ಸಂಬಳವನ್ನು ಮಾರಕ ಕೊರೋನಾವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಸೆಣೆಸುವವರಿಗಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಈ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದೂಡಲು ಕರೆ ನೀಡಿದರು, 

ಈಗಾಗಲೇ ಕೆನಡಾ ಸೇರಿ ಅನೇಕ ರಾಷ್ಟ್ರಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗೋಷಿಸಿದೆ.ಇದೀಗ ಭಾರತದ ಪ್ರಸಿದ್ಧ ಕುಸ್ತಿಪಟು ಭಜರಂಗ್ ಕ್ರೀಡಾಕುಟವನ್ನು ಮುಂದೂಡಲು ಕರೆ ನೀಡಿದ್ದಾರೆ.

"ನನ್ನ ಆರು ತಿಂಗಳ ಸಂಬಳವನ್ನು ದಾನ ಮಾಡಲು ನಾನು ನಿರ್ಧರಿಸಿದ್ದೇನೆ" ಭಜರಂಗ್ ಟ್ವಿಟ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದು ಶ್ಲಾಘನೀಯ ಪ್ರಯತ್ನ ಎಂದು  ಸಚಿವರು ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಭಜರಂಗ್, "ಒಲಿಂಪಿಕ್ಸ್‌ಗೆ ಮೊದಲು ನಾವು ಕೊರೋನಾ ವಿರುದ್ಧ ಹೋರಾಡಬೇಕಿದೆ.  ಪರಿಸ್ಥಿತಿ ಸುಧಾರಿಸದಿದ್ದರೆ ಮತ್ತು 2-3 ತಿಂಗಳು ಇದೇ ಬಗೆಯಲ್ಲಿ ಮುಂದುವರಿದರೆ , ಒಲಿಂಪಿಕ್ಸ್ ಅನ್ನು ಮುಂದೂಡುವುದು ಸೂಕ್ತ. ಕೊರೋನಾವೈರಸ್ ನಿರಂತರವಾಗಿ ಹಾನಿಗೊಳಿಸುವುದರೊಡನೆ  ರಾಷ್ಟ್ರಗಳು ತಮ್ಮ ಕ್ರೀಡಾಪಟುಗಳನ್ನು ಒಲಂಪಿಕ್ಸ್ ಗೆ ಕಳಿಸಲಾರವು. ಈಗಾಗಲೇ ಕೆನಡಾ ಮತ್ತು ಆಸ್ಟ್ರೇಲಿಯಾಗಳು ತಮ್ಮ ಕ್ರೀಡಾಪಟುಗಳನ್ನು ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾದಾಗ ಕ್ರೀಡಾಕೂಟ ನಡೆಸಿದರೆ ಪ್ರಯೋಜನವೇನು?

"ಇದು ಕೇವಲ ಭಾರತದ ಸಮಸ್ಯೆಯಲ್ಲ, ಇದು ಜಾಗತಿಕ ಸಮಸ್ಯೆಯಾಗಿದೆ, ಇದನ್ನು ಮೊದಲು ನಿಭಾಯಿಸಬೇಕಾಗಿದೆ" ಎಂದು ಅವರು ಹೇಳಿದರು.

2019 ರ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಭಜರಂಗ್ ರೈಲ್ವೆ ಇಲಾಖೆಯವಿಶೇಷ ಕರ್ತವ್ಯದ (ಒಎಸ್‌ಡಿ) ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

SCROLL FOR NEXT