ಕ್ರೀಡೆ

ಐಎಸ್‌ಎಲ್‌: ಬೆಂಗಳೂರು ಎಫ್‌ಸಿಯ 32 ಮಂದಿಯ ಟೀಂಗೆ ಸುನಿಲ್ ಚೆಟ್ರಿ ನೇತೃತ್ವ

ಬೆಂಗಳೂರು ಎಫ್‌ಸಿ ಮುಂಬರುವ ಐಎಸ್‌ಎಲ್ ಸೀಸನ್ ಗಾಗಿ ತನ್ನ 32 ಮಂದಿಯ ತಂಡವನ್ನು ಘೋಷಿಸಿದ್ದು, ಸತತ ಎಂಟನೇ ಸೀಸನ್ ನಲ್ಲಿಯೂ ಸುನಿಲ್ ಚೆಟ್ರಿ ಅವರೇ ತಂಡದ ನೇತೃತ್ವ ವಹಿಸಲಿದ್ದಾರೆ. 

ಬೆಂಗಳೂರು: ಬೆಂಗಳೂರು ಎಫ್‌ಸಿ ಮುಂಬರುವ ಐಎಸ್‌ಎಲ್ ಸೀಸನ್ ಗಾಗಿ ತನ್ನ 32 ಮಂದಿಯ ತಂಡವನ್ನು ಘೋಷಿಸಿದ್ದು, ಸತತ ಎಂಟನೇ ಸೀಸನ್ ನಲ್ಲಿಯೂ ಸುನಿಲ್ ಚೆಟ್ರಿ ಅವರೇ ತಂಡದ ನೇತೃತ್ವ ವಹಿಸಲಿದ್ದಾರೆ. ಐವರು ಅಂಡರ್ -21 ಆಟಗಾರರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು ನವೆಂಬರ್ 22 ರಂದು ಎಫ್‌ಸಿ ಗೋವಾ ವಿರುದ್ಧದ ಅಭಿಯಾನವನ್ನು ಪ್ರಾರಂಭಿಸಲಿದೆ.

ಕಳೆದ ಸೀಸನ್  ತಂಡದಿಂದ 17 ಆಟಗಾರರು ಮತ್ತೆ ಆಯ್ಕೆಯಾಗುವುದರೊಂದಿಗೆ  ತಂಡ ತಮ್ಮ ನಾಲ್ಕನೇ ಇಂಡಿಯನ್ ಸೂಪರ್ ಲೀಗ್ ಅಭಿಯಾನದತ್ತ ಸಾಗಿದೆ. "ಕ್ಲಬ್ ಗಾಗಿ, ಕಳೆದ ಸೀಸನ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ನಾವು ತಯಾರಾಗಿದ್ದೇವೆ.ಅವರಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬುದನ್ನು ಕಲಿಯಬಲ್ಲ ಆಟಗಾರರನ್ನು ನಾವು ಗುರುತಿಸಿದ್ದೇವೆ. ಇದರಿಂದ ಅವರು ತಂಡಕ್ಕೆ ಸಹಾಯ ಮಾಡುತ್ತಾರೆ. ಅವರು ಹೇಗೆ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಲು ಇದು ಕುತೂಹಲಕ್ಕೆ ಕಾರಣವಾಗಿದೆ. ”ಎಂದು ತಂಡದ ಮುಖ್ಯ ತರಬೇತುದಾರ ಕಾರ್ಲೆಸ್ ಕ್ಯುಡ್ರಾಟ್ ಹೇಳಿದರು

ಸುರೇಶ್ ವಾಂಗ್ಜಮ್, ಅಮಯ್ ಮೊರಾಜ್ಕರ್, ದೀಪೇಶ್ ಚೌಹಾಣ್, ಥಾಯ್ ಸಿಂಗ್ ಇಮ್ಯಾನ್ಯುಯೆಲ್ ಲಾಲ್ಚಾಂಚುವಾ ಟೀಂ ನಲ್ಲಿ ಉತ್ತಮ ಬೆಳವಣಿಗೆಯ ಆಟಗಾರರ ಸ್ಥಾನ ತುಂಬಲಿದ್ದಾರೆ. ಜುವಾನ್ ಗೊನ್ಜಾಲೆಜ್, ಡಿಮಾಸ್ ಡೆಲ್ಗಾಡೊ, ಎರಿಕ್ ಪಾರ್ಟಲು ಮತ್ತು ದೇಶೋರ್ನ್ ಬ್ರೌನ್ ಈ ಸೀಸನ್ ನಲ್ಲಿ ತಂಡದಲ್ಲಿ ಉಳಿದುಕೊಂಡಿರುವ  ವಿದೇಶಿ ಆಟಗಾರರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ದಾಳಿ; ಕನಿಷ್ಠ 87 ನಾವಿಕರು ಸಾವು

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ನ್ಯೂಜಿಲ್ಯಾಂಡ್!

'ನರಕ.. ಇರಾನ್ ಅಲ್ಲದವರಾದ್ರೆ ಮುಚ್ಕೊಂ*ರಿ': Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!

ಸೌದಿ ಅರೇಬಿಯಾ ಮೇಲೆ ದಾಳಿ ಬೇಡ: ನಾವು ಯುದ್ಧಕ್ಕೆ ಇಳಿಯಬೇಕಾಗುತ್ತೆ; ಇರಾನ್‌ಗೆ ಪಾಕಿಸ್ತಾನ ನೇರ ಧಮ್ಕಿ!

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

SCROLL FOR NEXT