ಕ್ರೀಡೆ

ಫುಟ್ಬಾಲ್ ದಂತಕಥೆ ಮರಡೋನಾಗೆ ಮೆದುಳು ಶಸ್ತ್ರಚಿಕಿತ್ಸೆ, ಆರೋಗ್ಯ ಉತ್ತಮವಾಗಿದೆ ಎಂದ ವೈದ್ಯರು

Raghavendra Adiga

ಒಲಿವೋಸ್: ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರು ಮಂಗಳವಾರ ಬ್ಯೂನಸ್ಟ್ ನ ವಿಶೇಷ ಖಾಸಗಿ ಚಿಕಿತ್ಸಾಲಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ನಿವಾರಣೆಗಾಗಿ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರ ವೈದ್ಯರು ತಿಳಿಸಿದ್ದಾರೆ.

"ನಾವು ರಕ್ತ ಹೆಪ್ಪುಗಟ್ಟುವಿಕೆಯನ್ನು ಯಶಸ್ವಿಯಾಗಿ ನಿವಾರಿಸಿದ್ದೇವೆ. ಡಿಯಾಗೋ ಶಸ್ತ್ರಚಿಕಿತ್ಸೆ ಸಮಯದಲ್ಲಿ ಚೆನ್ನಾಗಿ ಸ್ಪಂದಿಸಿದ್ದಾರೆ.ಎಂದು ರಾಜಧಾನಿ ಬ್ಯೂನಸ್ ಐರಿಸ್‌ನ ಖಾಸಗಿ ಚಿಕಿತ್ಸಾಲಯದ ಲಿಯೋಪೋಲ್ಡೊ ಲೂಕ್ ಹೇಳಿದರು.

ಸದ್ಯ ಅವರನ್ನು ನಿಗಾದಲ್ಲಿಡಲಾಗಿದೆ. ಸಮಸ್ಯೆ ನಿಯಂತ್ರಣದಲ್ಲಿದೆ. ಎಂದು ಹೇಳಲಾಗಿದೆ.

ಅನಾರೋಗ್ಯದ ನಂತರ ಸರಣಿ ಪರೀಕ್ಷೆಗಳಿಗಾಗಿ ಸೋಮವಾರ. ವಿಶ್ವಕಪ್ ವಿಜೇತ ಮರಡೋನಾ ಅವರನ್ನು ಲಾ ಪ್ಲಾಟಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು - ಅಲ್ಲಿ ಅವರು ಅಗ್ರತಂಡದ ಗಿಮ್ನಾಶಿಯಾ ವೈ ಎಸ್ಗ್ರಿಮಾದ ತರಬೇತುದಾರರಾಗಿದ್ದಾರೆ. ಅಲ್ಲಿ ನಡೆಸಿದ್ದ ಸ್ಕ್ಯಾನಿಂಗ್ ಪರೀಕ್ಷೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತೋರಿಸಿದೆ.  ಅದಾಗಿ ಮಂಗಳವಾರ ಅವರನ್ನು ರಾಜಧಾನಿಯ ಉತ್ತರದಲ್ಲಿರುವ ಉತ್ತಮ ಚಿಕಿತ್ಸಾಲಯಕ್ಕೆ ವರ್ಗಾಯಿಸಲಾಯಿತು.

ಶುಕ್ರವಾರ 60 ನೇ ವರ್ಷಕ್ಕೆ ಕಾಲಿಟ್ಟ ಮರಡೋನಾ ಈ ಹಿಂದೆ ಎರಡು ಬಾರಿ ಹೃದಯಾಘಾತದಿಂದ ಬದುಕುಳಿದಿದ್ದಾರೆ ಮತ್ತು ಹೆಪಟೈಟಿಸ್‌ಗೆ ತುತ್ತಾಗಿದ್ದು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

SCROLL FOR NEXT