ಕ್ರೀಡೆ

ಆರನೇ ಬಾರಿ ನಂ.1 ಸ್ಥಾನಕ್ಕೇರಿ ಬಾಲ್ಯದ ಹೀರೋ ಸಂಪ್ರಾಸ್ ದಾಖಲೆ ಸರಿಗಟ್ಟಿದ ಜೊಕೊವಿಕ್ 

Raghavendra Adiga

ಮುಂದಿನ ವಾರ ಸೋಫಿಯಾದಲ್ಲಿ ನಡೆಯಲಿರುವ ಎಟಿಪಿ ಟೂರ್ ಪಂದ್ಯಾವಳಿಯಿಂದ ನಿಕಟ ಪ್ರತಿಸ್ಪರ್ಧಿ ರಾಫೆಲ್ ನಡಾಲ್ ಹೊರಗುಳಿದ ನಂತರ ನೊವಾಕ್ ಜೊಕೊವಿಕ್ ತಮ್ಮ ಬಾಲ್ಯದ ಹೀರೋ ಪೀಟ್ ಸಂಪ್ರಾಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಅವರು  ಆರನೇ ಬಾರಿಗೆ ವರ್ಷಾಂತ್ಯದ ಪುರುಷರ ವಿಶ್ವ ನಂಬರ್ ಒನ್ ಟೆನಿಸ್ ಶ್ರೇಯಾಂಕವನ್ನು ಕಾಯ್ದುಕೊಂಡಿದ್ದಾರೆ.

"ಪೀಟ್ ನಾನು ಬೆಳೆಯುತ್ತಿರುವಾಗ ನಾನು ನೋಡುತ್ತಿದ್ದ ಹೀರೋ ಆಗಿದ್ದರು ಆದ್ದರಿಂದ ಅವರ ದಾಖಲೆಯನ್ನು ಸರಿಗಟ್ಟುವುದು ನನಗೆ ಹೆಮ್ಮೆಯ ಕ್ಷಣವಾಗಿದೆ" ಎಂದು ಜೊಕೊವಿಕ್ ಎಟಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಾನು ಉತ್ತಮ ಆಟಗಾರನಾಗಲು ಪ್ರಯತ್ನಿಸುತ್ತಲೇ ಇರುತ್ತೇನೆ, ಅದಕ್ಕೆ ಸರಿಯಾಗಿ ಹೆಚ್ಚಿನ ಯಶಸ್ಸನ್ನು ಹೊಂದಿದ್ದೇನೆ ಮತ್ತು ನನ್ನ ಹೃದಯದಿಂದ ನಾನು ಪ್ರೀತಿಸುವ ಕ್ರೀಡೆಯಲ್ಲಿ ಹೆಚ್ಚಿನ ದಾಖಲೆಗಳನ್ನು ಮುರಿಯುತ್ತೇನೆ."

ಈ ವರ್ಷ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿ ದಾಖಲೆಯ ಎಂಟನೇ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಅನ್ನು ಗೆಲ್ಲುವ ಮುನ್ನ ಜನವರಿಯಲ್ಲಿ ಎಟಿಪಿ ಕಪ್ ಗೆದ್ದಿದ್ದರು.ಅವರು ಸಿನ್ಸಿನಾಟಿ ಮಾಸ್ಟರ್ಸ್ ಮತ್ತು ರೋಮ್ ನಲ್ಲಿ 36 ನೇ ಎಟಿಪಿ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದರು.

ಸೆಪ್ಟೆಂಬರ್‌ನಲ್ಲಿ ಜೊಕೊವಿಕ್ ಅಮೆರಿಕನ್ ಪೀಟ್ ಸಂಪ್ರಾಸ್ ದಾಖಲೆ ಮುರಿದಿದ್ದರು, ಸಂಪ್ರಾಸ್‌ 1993 ಮತ್ತು 1998 ರ ನಡುವೆ ಸತತ ಆರು ವರ್ಷಗಳ ಕಾಲ ನಂ 1 ಸ್ಥಾನದಲ್ಲಿದ್ದರು, ಒಟ್ಟಾರೆ ಅಗ್ರ ಶ್ರೇಯಾಂಕದಲ್ಲಿ ಹೆಚ್ಚಿನ ವಾರಗಳವರೆಗೆ ಉಳಿದ ಆಟಗಾರರಾಗಿ ಅವರು ಗುರುತಿಸಿಕೊಂಡಿದ್ದರು,

17 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ 33 ವರ್ಷದ ಜೊಕೊವಿಕ್, ರೋಜರ್ ಫೆಡರರ್ 310 ವಾರಗಳ ನಂ 1 ಸ್ಥಾನದಲ್ಲಿದ್ದ ದಾಖಲೆಯತ್ತ ಸಾಗುವುದು ನನ್ನ ಗುರಿ ಎಂದಿದ್ದಾರೆ. 
 

SCROLL FOR NEXT