ಕ್ರೀಡೆ

ಅಟ್ಲಾಂಟಿಕ್ ಟೈರ್ ಟೆನಿಸ್ ಚಾಂಪಿಯನ್ ಶಿಫ್: ನಾಲ್ಕರ ಘಟ್ಟಕ್ಕೆ ಭಾರತದ ಪ್ರಜ್ಞೇಶ್ ಗುಣೇಶ್ವರನ್

Nagaraja AB

ಕ್ಯಾರಿ: ಅಟ್ಲಾಂಟಿಕ್ ಟೈರ್ ಟೆನಿಸ್ ಚಾಂಪಿಯನ್ ಶಿಫ್ ನ ಸೆಮಿಫೈನಲ್ ಗೆ ಭಾರತದ ಡೆವಿಸ್ ಕಪ್ ವಿಜೇತ ಪ್ರಜ್ಞೇಶ್ ಗುಣೇಶ್ವರನ್ ಲಗ್ಗೆ ಇಟ್ಟಿದ್ದಾರೆ. ಇಂದು ನಡೆದ ಕ್ವಾರ್ಟರ್ ಫೈನಲ್ ನಲ್ಲಿ  ಬ್ರೆಜಿಲ್ ನ ಥಾಮಸ್ ಬೆಲ್ಲುಚಿ ಅವರನ್ನು 3-6,  7-5, 7-6 ರಿಂದ ಸೋಲಿಸಿ ಸೆಮಿಫೈನಲ್  ಪ್ರವೇಶಿಸಿದರು. 

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಟೆನಿಸ್ ಚಟುವಟಿಕೆಗಳು ಸ್ಥಗಿತಗೊಂಡು ಪುನರಾರಂಭವಾದ ಬಳಿಕ ಪ್ರಜ್ಞೇಶ್ ಅವರು ಎರಡನೇ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಕಳೆದ ತಿಂಗಳು ಜರ್ಮನಿಯಲ್ಲಿ ನಡೆದಿದ್ದ ಇಸಾಮ್ಮಿಂಗ್ ಟೂರ್ನಿಯಲ್ಲೂ ಅವರು ಸೆಮಿಫೈನಲ್ ಗೆ ಕಾಲಿಟ್ಟಿದ್ದರು.

146ನೇ ರ‍್ಯಾಂಕಿನ ಆಟಗಾರ, ಫೈನಲ್ ನಲ್ಲಿ ಡೆನ್ಮಾರ್ಕ್ ನ ಮೈಕಲ್ ಥೋಪ್ ಗಾರ್ಡ್ ಅವರ ಸವಾಲನ್ನು ಎದುರಿಸಬೇಕಾಗಿದೆ. ಮೈಕೆಲ್ ಅವರು ವಿಶ್ವ ಕ್ರಮಾಂಕದಲ್ಲಿ 198ನೇ ಸ್ಥಾನದಲ್ಲಿದ್ದಾರೆ.

ಪ್ರಜ್ಞೇಶ್ ಅವರು ತಾವಾಡಿದ ಆರು ಚಾಲೆಂಜರ್ ಟೂರ್ನಿಗಳ ಫೈನಲ್ ಗಳ ಪೈಕಿ ಎರಡು ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 2018ರ ಏಪ್ರಿಲ್ ನಲ್ಲಿ ಚೀನಾದ ಆ್ಯನಿಂಗ್ ಹಾಗೂ ಅದೇ ವರ್ಷದ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಅವರಿಗೆ ಪ್ರಶಸ್ತಿ ಬಂದಿತ್ತು.

SCROLL FOR NEXT