ಕ್ರೀಡೆ

ಭಜರಂಗ್ ಗೆ ಯುಎಸ್ ನಲ್ಲಿ ತರಬೇತಿ ಪಡೆಯಲು ಅವಕಾಶ 

Nagaraja AB

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಗೆ  ಅರ್ಹತೆ ಪಡೆದ ಮತ್ತು ಪದಕಕ್ಕೆ ಪ್ರಬಲ ಸ್ಪರ್ಧಿಯಾಗಿ ಪರಿಗಣಿಸಲ್ಪಟ್ಟ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಯುಎಸ್ ನಲ್ಲಿ ಒಂದು ತಿಂಗಳ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ.ಮಿಷನ್ ಒಲಿಂಪಿಕ್ ಕೋಶದ 50ನೇ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಈ ಶಿಬಿರವು ಬರುವ ವರ್ಷದ ಡಿಸೆಂಬರ್ 4ರಿಂದ ಜನವರಿ 3, 2021ರವರೆಗೆ ಮಿಚಿಗನ್ ನ ಕ್ಲಿಫ್ ಕೀನ್ ವ್ರೆಸ್ಟಿಂಗ್ ಕ್ಲಬ್ ನಲ್ಲಿ ನಡೆಯಲಿದೆ.

ಕೊರೋನಾವೈರಸ್ ನಂತರ , ತರಬೇತಿ ಚಟುವಟಿಕೆಗಲು ಸೋನೆಪತ್ ನಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಾರಂಭವಾದವು. ಭಜರಂಗ್ ತಮ್ಮ ತರಬೇತುದಾರರಾದ ಎಂಜರಿಯೋಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಯುಎಸ್ ಪ್ರವಾಸ ಮಾಡಲಿದ್ದಾರೆ.

SCROLL FOR NEXT