ಕ್ರೀಡೆ

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊಗೆ ಕೋವಿಡ್-19 ಸೋಂಕು

Raghavendra Adiga

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಕೊರೊನಾ ವೈರಸ್ (ಕೋವಿಡ್ -19) ಸೋಂಕಿಗೆ ಒಳಗಾಗಿದ್ದಾರೆ.

ಕೋವಿಡ್-19 ಸೋಂಕಿಗೆ ಒಳಗಾಗಿದ್ದರೂ ಸಹ ಅವರು ಆರೋಗ್ಯವಾಗಿದ್ದಾರೆ. ಮತ್ತು ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ರೊನಾಲ್ಡಿನೊ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

 ರೊನಾಲ್ಡಿನೊ ಬೆಲೊ ಹೊರಿಜಾಂಟೆಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ರೊನಾಲ್ಡಿನೊತಮಗೆ ಕೋವಿಡ್ ಸೋಂಕಿರುವುದನ್ನು ಇನ್ಸ್ಟಾಗ್ರಾಮ್ ಮೂಲಕ ಹೇಳಿಕೊಂಡಿದ್ದಾರೆ.

ಪೆರುಗ್ವೆಯಲ್ಲಿ ಐದು ತಿಂಗಳ ಗೃಹಬಂಧನದಲ್ಲಿದ್ದ ನಂತರ ಆಗಸ್ಟ್ ನಲ್ಲಿ ರೊನಾಲ್ಡಿನೊ ಅವರನ್ನು ಬ್ರೆಜಿಲ್ ಗೆ ಹಿಂತಿರುಗಲು ಅನುಮತಿಸಲಾಗಿತ್ತು,

ರೊನಾಲ್ಡಿನೊ ಮತ್ತು ಅವರ ಸಹೋದರ ರಾಬರ್ಟೊ ಅಸಿಸ್ ಅವರೊಂದಿಗೆ ಮಾರ್ಚ್ ಆರಂಭದಲ್ಲಿ ಪೆರುಗ್ವೆಯಲ್ಲಿ ನಕಲಿ ಪಾಸ್‌ಪೋರ್ಟ್‌ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು.ಆದಾಗ್ಯೂ, ವಕೀಲರು ಆಟಗಾರನ ಪರ 1.6 ಮಿಲಿಯನ್ ಡಾಲರ್  ಜಾಮೀನು ನೀಡಿದ ನಂತರ ಅವರ ಬಿಡುಗಡೆಯಾಗಿತ್ತು. ವಿಚಾರಣೆಗೆ ನಿರೀಕ್ಷಿಸುವಂತೆ ಹೇಳಿ ಅವರನ್ನು ಅಸುನ್ಸಿಯಾನ್‌ನ ಹೋಟೆಲ್‌ನಲ್ಲಿ ಗೃಹಬಂಧನದಲ್ಲಿರಿಸಲಾಯಿತು ಎಂದು ಗೋಲ್ ಡಾಟ್ ಕಾಮ್ ವರದಿ ಮಾಡಿದೆ.

ಒಪ್ಪಂದದ ಭಾಗವಾಗಿ ನಕಲಿ ಪಾಸ್‌ಪೋರ್ಟ್‌ಗಳೊಂದಿಗೆ ದೇಶಕ್ಕೆ ಪ್ರವೇಶಿಸಿದ್ದಾಗಿ ಇಬ್ಬರೂ  ತಪ್ಪೊಪ್ಪಿಕೊಂಡಿದ್ದರು.
 

SCROLL FOR NEXT