ಕ್ರೀಡೆ

ಎಐಟಿಎ ಅಧ್ಯಕ್ಷರಾಗಿ ಸಂಸದ ಅನಿಲ್ ಜೈನ್ ಅವಿರೋಧ ಆಯ್ಕೆ

Lingaraj Badiger

ನವದೆಹಲಿ: ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಡಾ.ಅನಿಲ್ ಜೈನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂಬಂಧ ಎಐಟಿಎ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿ ಮಾಹಿತಿ ನೀಡಿದ್ದು, ಎಐಟಿಎಯ ವಾರ್ಷಿಕ ಸಾಮಾನ್ಯ ಸಭೆ ಇಂದು ನಡೆಯಿತು. ಇದರಲ್ಲಿ ಅನಿಲ್ ಅವರನ್ನು ಒಕ್ಕೂಟದ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಅನಿಲ್ ಈ ಹಿಂದೆ 2016 ರಿಂದ 2020 ರವರೆಗೆ ಎಐಟಿಎ ಉಪಾಧ್ಯಕ್ಷರಾಗಿದ್ದರು ಮತ್ತು ಹಾಲಿ ಅಧ್ಯಕ್ಷ ಪ್ರವೀಣ್ ಮಹಾಜನ್ ಅವರ ಅವಧಿ ಮುಗಿದ ನಂತರ ಅವರು ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
 
ಅಧ್ಯಕ್ಷರ ಹುದ್ದೆಯ ಹೊರತಾಗಿ, ಎಲ್ಲಾ ಉನ್ನತ ಹುದ್ದೆಗಳು ಮತ್ತು ಕಾರ್ಯನಿರ್ವಾಹಕ ಸದಸ್ಯರ ಆಯ್ಕೆ ಅವಿರೋಧವಾಗಿದೆ ಮತ್ತು ಯಾವುದೇ ಸ್ಥಾನಕ್ಕೂ ಚುನಾವಣೆ ನಡೆದಿಲ್ಲ. ಎಐಟಿಎಯ ಹೊಸ ಸದಸ್ಯರ ಅಧಿಕಾರಾವಧಿ 2024 ರವರೆಗೆ ಇರುತ್ತದೆ.

SCROLL FOR NEXT