ಕ್ರೀಡೆ

ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದ ಸಿಂಧು, ಸಿಕ್ಕಿ ರೆಡ್ಡಿ, ಅಶ್ವಿನಿ: ಭಾರತದ ಪರ ಆಡಲಿರುವ ಸೈನಾ, ಶ್ರೀಕಾಂತ್

Raghavendra Adiga

ಚೆನ್ನೈ: ಥಾಮಸ್ ಮತ್ತು ಉಬರ್ ಕಪ್ ಫೈನಲ್‌ಗಳನ್ನು ಮುಂದೂಡಿದ ಕೆಲ ದಿನಗಳ ನಂತರ, ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ ಬಿಡುಗಡೆ ಮಾಡಿದ ಆರು ಸದಸ್ಯರ ತಂಡಗಳ ಪಟ್ಟಿಯಿಂದ ಕನಿಷ್ಠ ಮೂವರು ಆಟಗಾರರು ಒಡೆನ್ಸ್‌ನಲ್ಲಿ ನಡೆಯಲಿರುವ ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಿಎಐ ಅಧ್ಯಕ್ಷ ಹಿಮಂತ ಬಿಸ್ವ ಶರ್ಮಾ ವರೊಂದಿಗೆ ಮಾತನಾಡಿದ ನಂತರ ಟಿಯುಸಿ ತಂಡಕ್ಕೆ ಸೇರ್ಪಡೆಯಾದ ವಿಶ್ವ ಚಾಂಪಿಯನ್ ಪಿವಿ ಸಿಂಧು, ಡೆನ್ಮಾರ್ಕ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಅವರು ಬಿಎಐಗೆ ಪತ್ರ ಕಳಿಸಿದ್ದಾರೆ.

ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಕೂಡ ಈ ಪಂದ್ಯಾವಳಿಯಿಂದ ದೂರ ಉಳಿಯಲು ನಿರ್ಧರಿಸಿದ ನಂತರ ಮಾಜಿ ಜೂನಿಯರ್ ವಿಶ್ವ ನಂ 1 ಲಕ್ಷ್ಯ ಸೇನ್ ತಂಡದಲ್ಲಿ ಉಳಿದಿರುವ ಮೂರನೇ ಆಟಗಾರ. ಡಬಲ್ಸ್‌ನಲ್ಲಿ ತಮ್ಮ ಹೆಸರನ್ನು ನಮೂದಿಸಿದ ಬಿ ಸುಮೀತ್ ರೆಡ್ಡಿ ಮತ್ತು ಮನು ಅತ್ರಿ ಕೂಡ ಈವೆಂಟ್ ನಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ. 

ಲಂಡನ್ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಮಾಜಿ ವಿಶ್ವ ನಂ 1 ಕಿಡಂಬಿ ಶ್ರೀಕಾಂತ್ ಭಾರತದ ಪರ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಪತ್ರಿಕೆ ವರದಿ ಮಾಡಿದಂತೆ, ಡೆನ್ಮಾರ್ಕ್ ಓಪನ್‌ನಲ್ಲಿ ಭಾಗವಹಿಸಲು ಹೋಗುವ ಎಲ್ಲ ಆಟಗಾರರನ್ನು ಬಿಎಐಒಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಕೇಳಿಕೊಂಡಿತ್ತು. ಸೆಪ್ಟೆಂಬರ್ 17 ರೊಳಗೆ ಶಟ್ಲರ್‌ಗಳು ತಮ್ಮ ಲಭ್ಯತೆಯನ್ನು ತಿಳಿಸಬೇಕಿತ್ತು. ಇಲ್ಲಿಯವರೆಗೆ ತಮ್ಮ ಒಪ್ಪಿಗೆಯನ್ನು ಕಳುಹಿಸಿದವರಲ್ಲಿ ಪಿ ಕಶ್ಯಪ್, ಸುಭಂಕರ್ ಡೇ, ಮತ್ತು ಅಜಯ್ ಜಯರಾಮ್ ಸೇರಿದ್ದಾರೆ.

SCROLL FOR NEXT