ಕ್ರೀಡೆ

ಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ: 14 ಮಂದಿಗೆ ಗಾಯ

Raghavendra Adiga

ಬಲೂಚಿಸ್ತಾನ(ಪಾಕಿಸ್ತಾನ): ಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ 14 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ.

"ಇಂಡಸ್ಟ್ರಿಯಲ್ (ಹಬ್) ಟೌನ್ ಅನ್ನು ಬೆಚ್ಚಿಬೀಳಿಸಿದ ಸ್ಫೋಟದಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ 14 ಜನರು ಗಾಯಗೊಂಡಿದ್ದಾರೆ" ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ತಾರಿಕ್ ಎಲಾಹಿ ಮಾಸ್ಟೊಯ್ ಹೇಳಿದ್ದಾರೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

"ಅದೃಷ್ಟವಶಾತ್, ಸ್ಫೋಟದಲ್ಲಿ ಯಾವುದೇ ಫುಟ್ಬಾಲ್ ಆಟಗಾರರಿಗೆ ಗಾಯಗಳಾಗಿಲ್ಲ" ಅವರು ಹೇಳಿದರು.

ಅಪರಿಚಿತ ದುಷ್ಕರ್ಮಿಗಳು ಫುಟ್ಬಾಲ್ ಮೈದಾನದ ಗೋಡೆಯ ಪಕ್ಕದಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಇಟ್ಟಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದರು. ಸಧ್ಯ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯು ಸ್ಫೋಟದ ಜವಾಬ್ದಾರಿಯನ್ನು ಹೊತ್ತಿಲ್ಲ.

ಬಲೂಚಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದು, ಕಳೆದ ವರ್ಷ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿದೆ ಎಂದು ಡಾನ್ ವರದಿ ಮಾಡಿದೆ.

SCROLL FOR NEXT