ಏಷ್ಯನ್ ಕುಸ್ತಿಯಲ್ಲಿ ಚಿನ್ನದ ಪದಕ ಗಳಿಸಿದ ಭಾರತೀಯರು 
ಕ್ರೀಡೆ

ಏಷ್ಯನ್ ಕುಸ್ತಿ: ಭಾರತಕ್ಕೆ ತ್ರಿವಳಿ ಸ್ವರ್ಣ ಸಂಭ್ರಮ

ಭಾರತದ ಸೂಪರ್‌ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಶುಕ್ರವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಚೆನ್ನೈ: ಭಾರತದ ಸೂಪರ್‌ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಶುಕ್ರವಾರ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

ಚೀನೀ ಮತ್ತು ಜಪಾನಿನ ಪ್ರತಿಸ್ಪರ್ಧಿಗಳ ಅನುಪಸ್ಥಿತಿಯಲ್ಲಿ ವಿನೇಶ್ ಅವರು 53 ಕೆಜಿ ವಿಭಾಗದಲ್ಲಿ ಒಂದೂ ಪಾಯಿಂಟ್ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದರು. 

ದಿವ್ಯಾ ಕಕ್ರನ್, ಅನ್ಶುಗೆ ಚಿನ್ನ, ಸಾಕ್ಷಿಗೆ ಬೆಳ್ಳಿ

ಈ ಕ್ರೀಡಕೂಟದಲ್ಲಿ ದಿವ್ಯಾ ಕಕ್ರನ್ (72 ಕೆಜಿ) ಚಿನ್ನ ಹಾಗೂ ಸಾಕ್ಷಿ ಮಲಿಕ್ (65 ಕೆಜಿ) ಬೆಳ್ಳಿ ಪದಕ ಗಳಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ದಿವ್ಯಾ ಪಾತ್ರವಾಗಿದ್ದಾರೆ. ಅನ್ಶು ಮಲಿಕ್ (57 ಕೆಜಿ) ಭಾರತಕ್ಕೆ ಇನ್ನೊಂದು ಚಿನ್ನದ ಪದಕ ತಂದು ಕೊಟ್ಟಿದ್ದಾರೆ.

ಗುರುವಾರ ಸರಿತಾ ಮೊರ್ (59 ಕೆಜಿ) ಚಿನ್ನದ ಪದಕ ಗಳಿಸಿದ್ದರೆ ಸೀಮಾ ಬಿಸ್ಲಾ (50 ಕೆಜಿ) ಮತ್ತು ಪೂಜಾ (76 ಕೆಜಿ) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಈ ಆವೃತ್ತಿಯಲ್ಲಿ ಭಾರತ ನಾಲ್ಕು ಚಿನ್ನ ಒಂದು  ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದೆ.  ಮತ್ತು ಇದೆಲ್ಲವನ್ನೂ ಮಹಿಳೆಯರ ವಿಭಾಗದ  ಸ್ಪರ್ಧೆಯಿಂದಲೇ ಪಡೆದದ್ದಾಗಿದೆ ಎನ್ನುವುದು ಗಮನಾರ್ಹ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT